ಅದಾನಿ ವಿಶ್ವದ ೩ನೇ ಶ್ರೀಮಂತ

ನವದೆಹಲಿ,ಆ.೩೦- ಉದ್ಯಮಿ ಗೌತಮ್ ಅದಾನಿ ಏಷ್ಯಾದ ಮೊದಲ ಹಾಗು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಕಲ್ಲಿದ್ದಲು ಉದ್ಯಮದ ಕಡೆಗೆ ತಿರುಗುವ ಮೊದಲು ವಜ್ರದ ವ್ಯಾಪಾರಿಯಾಗಿ ಅದೃಷ್ಟ ಪರೀಕ್ಷಿಸಿದ್ದ ಗೌತಮ್ ಅದಾನಿ ಇದೀಗ ವಿಶ್ವದ ಶ್ರೀಮಂತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಕಾಲೇಜು ಡ್ರಾಪ್‌ಔಟ್ ಅವರು ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಬೆಳೆದ ಘಟನೆ ರೋಚಕ. ಕಲ್ಲಿದ್ದಲು-ಬಂದರುಗಳ ಸಮೂಹ, ಡೇಟಾ ಸೆಂಟರ್‌ಗಳಿಂದ ಹಿಡಿದು ಸಿಮೆಂಟ್, ಮೀಡಿಯಾ ಮತ್ತು ಅಲ್ಯುಮಿನಾಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೈ ಆಡಿಸಿದ ಪರಿಣಾಮ ಶ್ರೀಮಂತ ವ್ಯಕ್ತಿಯ ಸಾಲಿನಲ್ಲಿ ನಿಂತಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಡುಗಡೆ ಮಾಡಿದ ಮೂರರಲ್ಲಿ ಒಬ್ಬ ಏಷ್ಯನ್ ಮುರಿದಿರುವುದು ಇದೇ ಮೊದಲ ಬಾರಿಗೆ. ಅದಾನಿ ಅವರಲ್ಲದೆ ಮುಖೇಶ್ ಅಂಬಾನಿ ಮತ್ತು ಚೀನಾದ ಜಾಕ್ ಮಾ ಕೂಡ ಈ ಸಾಲಿನಲ್ಲಿದ್ದಾರೆ.
ಗೌತಮ್ ಅದಾನಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅಮೇರಿಕಾದ ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತ ಎನ್ನುವ ಶ್ರೇಯ ಪಡೆದಿದ್ದಾರೆ.
ಗೌತಮ್ ಅದಾನಿ, ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು ಮತ್ತು ವಿಮಾನ ನಿಲ್ದಾಣ,, ನಗರ-ಅನಿಲ ವಿತರಕರು ಮತ್ತು ಕಲ್ಲಿದ್ದಲು ಗಣಿಗಾರರಾಗಿ ಗುರುತಿಸಿಕೊಂಡಿದ್ದಾರೆ.