ಅದಾನಿ ವಿವಾದ ತನಿಖೆಗೆ ಸಾಳ್ವೆ ಆಗ್ರಹ

ನವದೆಹಲಿ,ಮಾ.೪- ಉದ್ಯಮಿ ಗೌತಮ್ ಅದಾನಿ ಸಮೂಹದ ಸಮೂಹದ ಸಂಸ್ಥೆಗಳ ಕುರಿತು ಅಮೇರಿಕಾದ ಹಿಡನ್ ಬರ್ಗ್ ಸಂಶೋಧನಾ ಸಂಸ್ಥೆ ವರದಿ ಬಹಿರಂಗ ಮಾಡಿದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಹಿರಿಯ ವಕೀಲ ಹರೀಶ್ ಸಾಳ್ವೆ ಆಗ್ರಹಿಸಿದ್ದಾರೆ.

ಸುಪ್ರೀಂಕೋರ್ಟ್ ಸಮಿತಿ ರಚಿಸಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಮಧ್ಯಮ ವರ್ಗದ ಹೂಡಿಕೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ರಾಜಕೀಯವನ್ನು ಬದಿಗಿಟ್ಟು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ತಿಂಗಳು ಹಿಡನ್ ಬರ್ಗ್ ವರದಿ ಅದಾನಿ ಸಮೂಹದ ಷೇರುಗಳು ಪಾತಾಳಕ್ಕೆ ಕುಸಿದಿವೆ. ಅದಾನಿ ಸಮೂಹದ ಷೇರು ಕುಸಿತದಿಂದ ಷೇರುದಾರರಿಗೆ ಸಮಸ್ಯೆ ಎದುರಿಸುವಂತಾಗಿದೆ. ಮಧ್ಯಮ ವರ್ಗದ ಹೂಡಿಕೆದಾರರ ದುರದೃಷ್ಟದಿಂದ ಹಣ ಮರಳಿಸಿ ನೀಡುವ ದೃಷ್ಠಿಯಿಂದ ತನಿಖೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.

“ಹಿಂಡೆನ್‌ಬರ್ಗ್ ತಪ್ಪುಗಳನ್ನು ಬಹಿರಂಗಪಡಿಸಿದೆ. ವರದಿಯ ಸತ್ಯಾಸತ್ಯತೆಯ ಕುರಿತು ಸಮಗ್ರ ತನಿಖೆ ನಡೆಸಿ ನೈಜ ಮಾಹಿತಿ ಹೊರ ಹಾಕಬೇಕಾಗಿದೆ.

ಷೇರುಗಳನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ಹೂಡಿಕೆದಾರರ ವೆಚ್ಚದಲ್ಲಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಅವರ ಹಿತ ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ಧಾರೆ.

ಕಂಪನಿಗಳ ಮೇಲೆ ದಾಳಿ ಮಾಡಲು ಈ ರೀತಿಯ ವರದಿಗಳನ್ನು ಬಳಸಿದರೆ, ಸೆಬಿ ಸುಮ್ಮನಿರುವುದಿಲ್ಲ. ಅವರು ಮಾರುಕಟ್ಟೆಯ ಏರಿಳಿತವನ್ನು ಬಳಸಿಕೊಳ್ಳುವ ಸಾದ್ಯತೆಗಳಿವೆ.ಮಧ್ಯಮ ವರ್ಗದ ಹೂಡಿಕೆದಾರರಿಗೆ ಆಗುವ ನಷ್ಟ ತಪ್ಪಿಸುವ ಅಗತ್ಯವಿದೆ ಎಂದಿದ್ದಾರೆ.

ಮಧ್ಯಮವರ್ಗದ ಷೇರುದಾರರ ಹಣಕ್ಕೆ ಯಾವುದೇ ಮೋಸ ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.