ಅದಾನಿ ವಿವಾದ:ಬಿಜೆಪಿ-ವಿಪಕ್ಷಗಳ ಜಟಾಪಟಿ

ನವದೆಹಲಿ,ಮಾ.೧೬-ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೋರಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಬಿಗಿ ಪಟ್ಟು ಮುಂದುವರಿಸಿರುವ ನಡುವೆಯೇ ಉದ್ಯಮಿ ಗೌತಮ್ ಅದಾನಿ ಷೇರು ವಂಚನೆ ಪ್ರಕರಣವನ್ನು ಜಂಟಿ ಸದನ ಸಮಿತಿ- ಜೆಪಿಸಿ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿ ಪಟ್ಟು ಜಟಾಪಟಿಗೆ ಕಾರಣವಾಗಿದೆ.
ಅದಾನಿ ಪ್ರಕರಣವನ್ನು ಜೆಪಿಸಿ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಸಂಸತ್ ಭವನ ಮುಂದೆ ಮಾನವ ಸರಪಳಿ ರಚಿಸುವ ಮೂಲಕ ಷೇರು ವಂಚನೆ ಪ್ರರಣವನ್ನು ತನಿಖೆ ನಡೆಸುವಂತೆ ಆಗ್ರಹಿಸಿವೆ.
ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ” ನೀ ಕೊಡೆ ನಾ ಬಿಡೆ ” ಎನ್ನುವ ಪಟ್ಟು ಮತ್ತು ಪ್ರತಿಪಟ್ಟು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ಆರೋಪ,ಪತ್ಯಾರೋಪದಿಂದ ಸಂಸತ್ ಕಲಾಪ ಬಲಿಯಾಗಿದೆ.
ಕಲಾಪದ ಆರಂಭದಲ್ಲಿ ಪ್ರತಿಕ್ರಿಯಿಸಿದಕಾನೂನು ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್‌ನಲ್ಲಿ ಸುಳ್ಳುಗಳನ್ನು ಹೇಳುವ ಮೂಲಕ ರಾಷ್ಟ್ರವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರಕ್ಕೆ ಹಾನಿ ಅಥವಾ ಅವಮಾನ ಮಾಡಲು ಪ್ರಯತ್ನಿಸಿದರೆ, ನಾಗರಿಕರಾಗಿ .ಮೌನವಾಗಿರಲು ಸಾಧ್ಯವಿಲ್ಲ. ದೇಶ ಕಾಂಗ್ರೆಸ್ ನಾಯಕತ್ವವನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಸಂಸದರೊಬ್ಬರು ಸಂಸತ್ತಿನ ಪ್ರತಿಷ್ಠೆಯನ್ನು ಕುಗ್ಗಿಸಿರುವುದು ತುಂಬಾ ದುಃಖಕರವಾಗಿದೆ. ಭಾರತ ವಿರೋಧಿ ಶಕ್ತಿಗಳೆಲ್ಲವೂ ಒಂದೇ ಭಾಷೆಯಲ್ಲಿ ಮಾತನಾಡುತ್ತವೆ. ಭಾರತ ವಿರೋಧಿ ಗ್ಯಾಂಗ್‌ನ ಎಲ್ಲಾ ಸದಸ್ಯರು ಒಂದೇ ಸಾಲಿನಲ್ಲಿ ಮಾತನಾಡುತ್ತಾರೆ. ರಾಹುಲ್ ಗಾಂಧಿ ಏನು ಹೇಳುತ್ತಾರೋ ಅದನ್ನು ಪುನರಾವರ್ತಿಸುತ್ತಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.
ಕ್ಷಮೆ ಕೇಳುವ ಪ್ರಶ್ನೆ ಇಲ್ಲ: ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ ರಾಹುಲ್ ಗಾಂಧಿಯವರ ಹೇಳಿಕೆಗೆ “ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿ ಆಗಾಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು ಆಗ ಕ್ಷಮೆ ಕೋರಿದ್ದರಾ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತೀಯ ಪ್ರಜಾಪ್ರಭುತ್ವ ಒತ್ತಡದಲ್ಲಿದೆ ಮತ್ತು ದಾಳಿಗೆ ಒಳಗಾಗಿದೆ.ಭಾರತದಲ್ಲಿ ವಿರೋಧ ಪಕ್ಷದ ನಾಯಕ, ನಾವು ಆ ಜಾಗವನ್ನು ನ್ಯಾವಿಗೇಟ್ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು ಸಂಸತ್ತು, ಮುಕ್ತ ಪತ್ರಿಕಾ ಮತ್ತು ನ್ಯಾಯಾಂಗ, ಕೇವಲ ಸಜ್ಜುಗೊಳಿಸುವ ಕಲ್ಪನೆ, ಮತ್ತು ಎಲ್ಲದರ ಸುತ್ತಲೂ ಚಲಿಸುವ ನಿರ್ಬಂಧಿತವಾಗುತ್ತಿದೆ. ಹಾಗಾಗಿ, ನಾವು ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದರು.