ಅಥ್ಲೇಟಿಕ್ ವಿಭಾಗದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.31: ತಾಲೂಕಿನ ತೆಕ್ಕಲಕೋಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಿಂಜಾರಗೇರಿ ಶಾಲೆಯ ವಿದ್ಯಾರ್ಥಿ ಜಿ.ಶೇಖರ್ ಇತ್ತಿಚ್ಚೆಗೆ ನಡೆದ ತೆಕ್ಕಲಕೋಟೆ ವಲಯಮಟ್ಟದ ಕೀಡಾ ಕೂಟದಲ್ಲಿ ಉತ್ತಮ ಕ್ರೀಡಾ ಮನೋಭವ ತೋರಿ ಚಾಂಪಿಯನ್ ಆಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾನೆಂದು ಶಾಲಾ ಮುಖ್ಯಗುರು ಕೆ.ನಾಗರಾಜ ಅವರು ತಿಳಿಸಿದರು.
ಸಿರಿಗೇರಿ ಗ್ರಾಮದಲ್ಲಿ ಇತ್ತಿಚ್ಚೆಗೆ ನಡೆದ ತೆಕ್ಕಲಕೋಟೆ ವಲಯಮಟ್ಟದ ಕೀಡಾ ಕೂಟದಲ್ಲಿ ವಿದ್ಯಾರ್ಥಿ ಜಿ.ಶೇಖರ್ ಅಥ್ಲೇಟಿಕ್ಸ್ ಕ್ರೀಡೆಯಲ್ಲಿ 400ಮೀ, 600ಮೀ ಪ್ರಥಮ ಸ್ಥಾನ, 200 ಮೀ, ದ್ವೀತಿಯ ಸ್ಥಾನ ಪಡೆದಿದ್ದಾನೆ.
ಎ.ಅಜೀತ್ ಕುಮಾರ 100 ಮೀ, 600ಮೀ ಓಟದಲ್ಲಿ ತೃತಿಯ ಸ್ಥಾನ ಮತ್ತು ಬಾಲಕರ ಥ್ರೋಬಾಲ್ ದ್ವೀತಿಯ ಸ್ಥಾನ ಪಡೆದಿದ್ದಾನೆ, ಇದನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಶಾಲಾ ಶಿಕ್ಷರು ಅಭಿನಂದಿಸಿದರು.