ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು

ಕೋಲಾರ,ಸೆ.೨೭:ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ದಿನಾಂಕ ೨೭ ರಿಂದ ೩೦ ರವರೆಗೆ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
ಈ ಕ್ರೀಡಾಕೂಟಕ್ಕೆ ಕೋಲಾರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು. ಹೇಮಂತ್ ರವರನ್ನು ತಂಡದ ವ್ಯವಸ್ಥಾಪಕರಾಗಿ ನೇಮಿಸಿ ಅವರ ಉಪಸ್ಥಿತಿಯಲ್ಲಿ ಇಂದು ದಿನಾಂಕ ೨೬ ರಂದು ಮಧ್ಯಾಹ್ನ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಕ್ರೀಡಾಕೂಟಕ್ಕೆ ಕಳಿಸಿಕೊಡಲಾಗಿದೆ.
ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಕೋಲಾರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಮುಖ್ಯ ತರಬೇತುದಾರ ಹೆಚ್.ಜಗನ್ನಾಥನ್, ಉಪಾಧ್ಯಕ್ಷ ಗೌಸ್‌ಖಾನ್, ಕಾರ್ಯದರ್ಶಿ ಆರ್.ರಾಜೇಶ್ ಬಾಬು ಹಾಗೂ ಪದಾಧಿಕಾರಿಗಳು ಈ ಕ್ರೀಡಾಪಟುಗಳಿಗೆ ಅಸೋಸಿಯೇಷನ್ ವತಿಯಿಂದ ಅಭಿನಂದನೆ ಸಲ್ಲಿಸಿ ಪ್ರಯಾಣ ಸುಖಕರವಾಗಿರಲಿ ಶುಭ ಎಂದು ಹಾರೈಸಿದ್ದಾರೆ.