ಅಥ್ಲೆಟಿಕ್‍ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ:ಸೆ.23: ತಾಲೂಕಿನ ಹೊನ್ನ ಕಿರಣಗಿ ಗ್ರಾಮದ ಶ್ರೀ ಶಿವಯೋಗಪ್ಪ ವಗ್ದರ್ಗಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅಥ್ಲೆಟಿಕ್‍ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಲಬುರಗಿಯ ಚಂದ್ರಶೇಖರ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ದಕ್ಷಿಣ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪುರುಷ
ವಿಭಾಗದಲ್ಲಿ ಮಲ್ಲಿಕಾರ್ಜುನ ಸಿದ್ದಪ್ಪ ಈರಬಾ ಅವರು ಎತ್ತರ ಜಿಗಿತ ಪ್ರಥಮ ಸ್ಥಾನ, ಚಕ್ರ ಎಸೆತ ಪ್ರಥಮ ಸ್ಥಾನ, ಹಾಗೂ ಮಲ್ಲಪ್ಪ ಶರಣಪ್ಪ ನಂದೂರ ಅವರು ಉದ್ದ ಜಿಗಿತದಲ್ಲಿ ದ್ವೀತಿಯ ಸ್ಥಾನ, ಮತ್ತು ಮಹಿಳಾ ವಿಭಾಗದಲ್ಲಿ ಭಾಗ್ಯಶ್ರೀ ಮರೆಪ್ಪ ಸಾತನೂರ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದು ಕಲಬುರಗಿ ಜಿಲ್ಲಾ ಮಟ್ಟಕ್ಕೆ ಆಯ್ಕಯಾಗಿದ್ದಾರೆ. ಶಾಲಾಭಿವೃದ್ದಿ ಮತ್ತು ಮೇಲುಸ್ತವಾರಿ ಸಮಿತಿಯ ಆಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ, ಮುಖ್ಯ ಗುರುಗಳಾದ ಬಸಪ್ಪ ಬಿರಾದಾರ, ಶಿಕ್ಷಕರಾದ ಚಂದ್ರಕಾಂತ ದೇಶಮುಖ, ಸಿದ್ದಣ್ಣ ನಾಗಬತ್ತಿ, ಮಹಮ್ಮದ್ ಅಫ್ಜಲ, ವಿಜಯಲಕ್ಷ್ಮಿ ಸಜ್ಜನ, ಮಮತಾ, ದೈಹಿಕ ಶಿಕ್ಷಕರಾದ ರಘುನಾಥ ಮಸರಬೋ, ಪ್ರಥಮ ದರ್ಜೆ ಸಹಾಯಕ ಸಾಗರ್ ಕಿಲ್ಲೆದಾರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.