ಅಥೆನಾ ನರ್ಸಿಂಗ್ ಕಾಲೇಜು: ವಿಶ್ವ ಆರೋಗ್ಯ ದಿನ ಆಚರಣೆ

ಮಂಗಳೂರು, ಎ.೮- ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು ಪ್ರತಿವರ್ಷ ಏಪ್ರಿಲ್ ೭ ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ಸಂಬಂಧಿತ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ದಿನದ ಅಂಗವಾಗಿ ಮಂಗಳೂರಿನ ಅಥೆನಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯದ ಸಹಯೋಗದೊಂದಿಗೆ ಅಥೆನಾ ನರ್ಸಿಂಗ್ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡರು ಈ ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರ ಉಪಸ್ಥಿತಿಯೊಂದಿಗೆ  ಪ್ರಾರಂಭವಾಯಿತು.  ಕುಮಾರಿ ಎವೆಂಜಿಲಿನ್ ಸ್ವಾಗತ ಕೋರಿದರು.   ಕುಮಾರಿ ಸುರಕ್ಷಾ ರವರು ವಿಶ್ವ ಆರೋಗ್ಯ ದಿನದ ಮಹತ್ವವನ್ನು ತಿಳಿಸಿದರು. ನಾಲ್ಕನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯರು ಮೂಕಾಭಿನಯದ ಮೂಲಕ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕುಮಾರಿ ಏಂಜಲ್ ಬೆನ್ನಿ ಯವರು ಧನ್ಯವಾದ ಸಲ್ಲಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಈIಖಿ ಖಉUಊS ಈಔಖ ಈIಖಿ IಓಆIಂ  ಎನ್ನುವ ಧ್ಯೇಯವಾಕ್ಯದೊಂದಿಗೆ ಅಥೆನಾ ನರ್ಸಿಂಗ್ ಕಾಲೇಜು ಆವರಣದಿಂದ ಅಥೆನಾ  ಆಸ್ಪತ್ರೆಯವರೆಗೆ ವಾಕಥಾನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟ ಅಥೆನಾ ಸಂಸ್ಥೆಯ ಆಡಳಿತಗಾರ ಶ್ರೀಮಾನ್ ಅರ್. ಎಸ್ ಶೆಟ್ಟಿಯಾನ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.