ಅಥೆನಾ: ಕ್ಷಯ ರೋಗ ಅರಿವು ಕಾರ್ಯಕ್ರಮ

ಮಂಗಳೂರು, ಮಾ.೨೫-೨೪ ೩.೨೦ ೨೧ರಂದು ಅಂತರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಆಚರಣೆಯ ಪ್ರಯುಕ್ತ ಅಥೆನಾ ಕಾಲೇಜ್ ಆಫ್ ನರ್ಸಿಂಗ್ ನ ನಾಲ್ಕನೇ ವರ್ಷದ ಬಿಎಸ್ಸಿ ಹಾಗೂ ಎರಡನೇ ವರ್ಷದ ಪಿ.ಬಿ.ಬಿಎಸ್ಸಿ ವಿದ್ಯಾರ್ಥಿಗಳು ಕ್ಷ ಯ ರೋಗದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡರು ಈ ಕಾರ್ಯಕ್ರಮಕ್ಕೆ ಗಂಜಿಮಠ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ! ಅಮಿತ್ ರಾಜ್ ಅತಿಥಿಯಾಗಿ ಮುಖ್ಯತ್ವ ವಹಿಸಿಕೊಂಡಿದ್ದರು. ಇವರೊಂದಿಗೆ ಅಥೆನಾ ಕಾಲೇಜಿನ ಕಮ್ಯುನಿಟಿ ವಿಭಾಗದ ಪ್ರೊಫೆಸರ್ ಶ್ರೀಮತಿ ಸುನೀತಾ ಹಾಗೂ ಇತರ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷೆ ಪಡೆದುಕೊಳ್ಳುತ್ತಿರುವ ರೋಗಿಗಳು, ಹಾಗೂ ಅವರ ಜೊತೆಗಾರರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ಜಾತಾ ಏರ್ಪಡಿಸಲಾಗಿತ್ತು. ಈ ಜಾತಕ್ಕೆ ಗಂಜಿ ಮಠದ ವೈದ್ಯದಿಕಾರಿ ಹಾಗೂ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರು ಚಾಲನೆ ನೀಡಿದರು. ವಿದ್ಯಾರ್ಥಿಗಳು ಕೊರೊನ ಹಾಗೂ ಕ್ಷಯ ರೋಗದ ಬಗ್ಗೆ ಅರಿವನ್ನು ಮೂಡಿಸುವ ಘೋಷಣೆಗಳನ್ನು ಮೊಳಗಿಸುತ್ತಾ ಜಾಥವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟ ಅಥೆನಾ ಸಂಸ್ಥೆಯ ಆಡಳಿತಗಾರ ಶ್ರೀಮನ್ ಆರ್. ಎಸ್. ಶೆಟ್ಟಿಯಾ ನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ದೀಪ ಪೀಟರ್ ಹಾಗೂ ಉಪಪ್ರಾಂಶುಪಾಲರಾದ ಭಗಿನಿ ಅಲ್ಫೋನ್ಸಾ ಅಂಚೆರಿಲ್, ಇವರಿಗೆ ಗಂಜಿಮಠ ಆರೋಗ್ಯ ಕೇಂದ್ರದಿಂದ ಧನ್ಯವಾದ ಸಲ್ಲಿಸಿದರು.