ಅಥಿತಿ ಶಿಕ್ಷಕ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.31: ನಗರದ ತಹಶೀಲ್ದಾರ್ ಕಛೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಅಥಿತಿ ಶಿಕ್ಷಕರ ತಾಲೂಕು ಸಂಘದವತಿಯಿಂದ ಅಥಿತಿ ಶಿಕ್ಷಕ ವಿವಿಧ ಬೇಡಿಕೆಗಳ ಕುರಿತು ತಹಶೀಲ್ದಾರ ಎನ್.ಆರ್.ಮಂಜುನಾಥ ಸ್ವಾಮಿಗೆ ಮನವಿ ಪತ್ರ ಸಲ್ಲಿಸಿದರು.
ತಾ.ಅಧ್ಯಕ್ಷ ಜಿ.ಲಿಂಗರೆಡ್ಡಿ ಮಾತನಾಡಿ ಸಿರುಗುಪ್ಪ ತಾಲೂಕಿನಲ್ಲಿ 2022-23ನೇ ಶೈಕ್ಷಣಕ ಸಾಲಿನಲ್ಲಿ 468 ಅಥಿತಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಥಿತಿ ಶಿಕ್ಷಕರ ಗೌರವಧನ 25ಸಾವಿರಕ್ಕೆ ಹೆಚ್ಚಳದೊಂದಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು, ತಿಂಗಳಿಗೆ ಒಂದು ರಜೆ ನೀಡಬೇಕು, ಅಥಿತಿ ಶಿಕ್ಷಕರಿಗೆ ಗುರುತಿನ ಚೀಟಿ ನೀಡಬೇಕು, ಶಾಲೆಯಲ್ಲಿ ನಿತ್ಯ ಅಥಿತಿ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವ ಅವಕಾಶ ಕಲ್ಪಿಸಿಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ವೀರಬಸವರಾಜ, ಸಹಕಾರ್ಯದರ್ಶಿ ಕೆ.ಗಾದಿಲಿಂಗ, ಸಂಚಾಕರಾದ ವೀರೇಶ, ನಳಿನಿ, ವೀರೇಶ, ಜ್ಯೋತಿ, ಹನುಮೇಶ ಇದ್ದರು.