ಅಥಣಿ :ಜೂ.3: 2023 ರ ಮೇ ತಿಂಗಳಲ್ಲಿ ಜರುಗಿದ ಅಥಣಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪೆÇೀಲೀಸ್ ಇಲಾಖೆಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಹಾಗೂ ದಕ್ಷತೆಯಿಂದ ಅತ್ಯುತ್ತಮ ಸೇವೆ ಸಲ್ಲಿಸಿ, ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಹಗಲಿರುಳು ಶ್ರಮಿಸಿದ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಅವರಿಗೆ ಬೆಳಗಾವಿ ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಡಾ, ಸಂಜೀವ ಪಾಟೀಲ, ಅವರು ತಮ್ಮ ಕಛೇರಿಯಲ್ಲಿ ಪ್ರಶಂಸನಾ ಪತ್ರ ನೀಡಿ ಪೆÇ್ರೀತ್ಸಾಹಿಸಿದ್ದಾರೆ,
ಕಳೆದ ಒಂದು ತಿಂಗಳಿನಿಂದ ಬಿಡುವಿಲ್ಲದೆ ಕರ್ತವ್ಯ ನಿಭಾಯಿಸಿ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ತಡೆಗೆ ಚೆಕ್ ಪೆÇೀಸ್ಟ್ ಗಳಲ್ಲಿ ಕರ್ತವ್ಯ, ಶಾಂತಿ- ಸುವ್ಯವಸ್ಥೆ ಕಾಪಾಡಿ, ಸುಸೂತ್ರವಾಗಿ ಮತದಾನ ನಡೆಯಲು ಮತಗಟ್ಟೆ, ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.