ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳುವಿನ ಪ್ರಕರಣಪೆÇೀಲೀಸರ ಕ್ಷಿಪ್ರ ಕಾರ್ಯಾಚರಣೆ. ತಾಯಿ ಮಡಿಲಿಗೆ ಮಗು : ಶಿಶು ಕಳ್ಳಿ ಅಂದರ್

ಅಥಣಿ ;ಸೆ.22: ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಮಹಿಳೆಯೋರ್ವಳನ್ನು ಕೇವಲ ಎರಡು ಗಂಟೆಯೊಳಗೆ ಬೆಳಗಾವಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ ಸಂಜೀವ ಪಾಟೀಲ. ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ. ಸಿಪಿಐ ರವೀಂದ್ರ ನಾಯ್ಕೋಡಿ. ಹಾಗೂ ಪಿಎ??? ಶಿವಶಂಕರ ಮುಕರಿ. ನೇತೃತ್ವದ ಅಥಣಿ ಪೆÇಲೀಸ್ ತಂಡ ಆರೋಪಿಯನ್ನು ಬಂಧಿಸಿ ನವಜಾತ ಶಿಶುವನ್ನು ತಾಯಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಬೆಳಗಾವಿ ಜಿಲ್ಲಾ ಪೆÇಲೀಸ್ ವರೀಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದರು.
ಅವರು ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು , ನರ್ಸ ವೇಷ ಹಾಕಿಕೊಂಡು ಬಾಯಿಗೆ ಮಾಸ್ಕ ಹಾಕಿಕೊಂಡು ಮುಂಜಾನೆ 10. 30 ಗಂಟೆಗೆ ಸರಕಾರಿ ಆಸ್ಪತ್ರೆ ಪ್ರವೇಶಿಸಿದ ಆರೋಪಿ ಮಹಿಳೆ ಹೆರಿಗೆ ಆದ ಮಹಿಳೆಯ ಬಳಿ ಬಂದು ನವಜಾತ ಶಿಶುವಿನ ಕುರಿತು ಕೆಲ ಸಂಗತಿಗಳನ್ನು ಕೇಳುವ ನೆಪದಲ್ಲಿ ಮಗುವಿನ ತೂಕ ಮಾಡಿಸಿಕೊಂಡು ಬರುತ್ತೇನೆ ಎಂದು ತಾಯಿ ಅಂಬಿಕಾ ಬೋವಿ ಇವಳಿಂದ ಮಗುವನ್ನು ಪಡೆದು ನಂತರ ಆಸ್ಪತ್ರೆಯ ಹೊರಗೆ ಹೋಗಿದ್ದಾಳೆ. ಸಾಕಷ್ಟು ಸಮಯದವರೆಗೂ ಮಗುವನ್ನು ತರದೇ ಇದ್ದಾಗ ಸಂಶಯ ಪಟ್ಟ ತಾಯಿ ಹಾಗೂ ಕುಟುಂಬದ ಇತರೆ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ ಕೆಲ ಸಮಯ ಹುಡುಕಿದರೂ ಸಿಗದೇ ಇದ್ದಾಗ ತಕ್ಷಣ ಸ್ಥಳೀಯ ಪೆÇಲೀಸ್ ರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೆÇಲೀಸರು ತಕ್ಷಣ ಕಾರ್ಯಪ್ರವೃತ್ತರಾದರೆಂದು ತಿಳಿಸಿದರು.
ಪೆÇಲೀಸರು ತಾಯಿಯಿಂದ ಎಲ್ಲ ಮಾಹಿತಿ ಪಡೆದ ಆಸ್ಪತ್ರೆ ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿ ಆಸ್ಪತ್ರೆ ಪ್ರವೇಶಿಸುವುದನ್ನು ಹಾಗೂ ಮಗುವನ್ನು ಎತ್ತಿಕೊಂಡು ಹೋಗುವುದನ್ನು ವೀಕ್ಷಿಸಿ ತಕ್ಷಣ ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಪೆÇಲೀಸ್ ತಂಡ ಮಹಾರಾಷ್ಟ್ರದ ಮಹಿಶಾಳ ಗ್ರಾಮದಲ್ಲಿ ಆರೋಪಿ ಮಹಿಳೆಯನ್ನು ನವಜಾತ ಶಿಶುವಿನೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ ಅವರು ಆರೋಪಿ ಮಹಿಳೆ ಮಾಲಾ ಉರ್ಫ ಐಶ್ವರ್ಯ ರಾಮಗೊಂಡ ಕಾಂಬಳೆ ಎಂದು ಗುರುತಿಸಲಾಗಿದೆ. ಈ ಆರೋಪಿ ಮಹಿಶ್ಯಾಳದ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದರೂ ಕೂಡ ಅಥಣಿಯಲ್ಲಿಯೇ ವಾಸವಾಗಿ ಖಾಸಗಿ ಆಸ್ಪತ್ರೆ ಸೇರಿದಂತೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಗೆಗೆ ಮಾಹಿತಿ ಬಂದಿದೆ ಎಂದರು.
ನವಜಾತ ಶಿಶು ಕಳ್ಳತನವಾಗಿ ಕೇವಲ ಎರಡುವರೆ ಘಂಟೆಗಳಲ್ಲಿಯೇ ಅಥಣಿ ಪೆÇಲೀಸರು ಆರೋಪಿಯನ್ನು ಬಂಧಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಪೆÇಲೀಸ್ ತಂಡದ ಈ ಕಾರ್ಯ ಮೆಚ್ಚಿ 20000 ಸಾವಿರ ರೂ.ಗಳ ಬಹುಮಾನ ಘೋಷಿಸಲಾಗಿದೆ ಎಂದ ಅವರು ಸರಕಾರಿ ಆಸ್ಪತ್ರೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕೆಲ ಅವಶ್ಯಕ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದೇನೆ ಎಂದರು.
ಈ ವೇಳೆ ಅಥಣಿ ಡಿವೈಎಸ್ಪಿ ಶ್ರೀಪಾದ ಜೆಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಅಥಣಿ ಪಿಎ??? ಶಂಕರ ಮುಕರಿ, ಕಾಗವಾಡ ಪಿಎ??? ಬಿ ಎಮ್ ರಬಕವಿ. ಪೆÇ್ರೀಬೆಶನರ ಪಿಎ??? ಪ್ರವೀಣ ಗರೆಬಾಳ ಹಾಗೂ ಫೆÇೀಲಿಸ್ ಸಿಬ್ಬಂದಿಗಳಾದ ಎಎ??? ಬಿ ಎಂ ರಜಾಕನವರ ಎಸ್ ಎಲ್ ಬಾಡಕರ. ಎ ಜಿ ಆರೇರ. ಮಹಾಂತೇಶ ಪಾಟೀಲ. ಎಸ್ ಎಸ್ ನಂದಿವಾಲೆ. ಬಿ ಆರ್ ವ್ಯಾಪಾರಿ. ಜಿ ಎಚ್ ಹೊನವಾಡ. ಪಿ ಬಿ ನಾಯಕ. ಎಮ್ ಸಿ ಡೊಡಮನಿ. ಎ ಎ ಈರಕರ. ಪಿ ಎನ್ ಕುರಿ. ಬಿ ವೈ ಮುನ್ನಾಪೂರ. ಜೆ ಎಚ್ ಡಾಂಗೆ. ಎಸ್ ಸಿ ಬಾಂಗಿ. ಕೆ ಬಿ ಶಿರಗೂರ. ಸೇರಿದಂತೆ ಅನೇಕರು ಕಾರ್ಯಚರಣೆಯಲ್ಲಿ ಬಾಗಿಯಾಗಿದ್ದರು.


ಸರ್ಕಾರಿ ಆಸ್ಪತ್ರೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಹಲವು ನ್ಯೂನತೆಗಳಿದ್ದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ ಆಸ್ಪತ್ರೆಯ ಭದ್ರತೆಯಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಅವರಿಗೆ ತಿಳಿಸಲಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ನ್ಯೂನತೆ ಆಗಬಾರದು ಎಂಬ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡಬೇಕು ಮತ್ತು ರೋಗಿಗಳ ಜೊತೆ ಬರುವ ಹಾಗೂ ಹೋಗುವವರು ಬಗ್ಗೆ ರಜಿಷ್ಟರದಲ್ಲಿ ದಾಖಲಿಸಬೇಕು ಮತ್ತು ಒಳಬರುವ ಹಾಗೂ ಹೊರ ಹೋಗುವ ದ್ವಾರಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು.

    ಡಾ. ಸಂಜೀವ ಪಾಟೀಲ.
  ಬೆಳಗಾವಿ ಜಿಲ್ಲಾ ಪೆÇಲೀಸ್        ವರಿಷ್ಠಾಧಿಕಾರಿ.