ಅಥಣಿ ಶುಗರ್ಸ್ ಕಾರ್ಖಾನೆಗೆ ಅತ್ಯುತ್ತಮ ಕೈಗಾರಿಕಾ ಶ್ರೇಷ್ಠ ಪ್ರಶಸ್ತಿ

ಕಾಗವಾಡ : ಜು.30:ಗೋವಾ ರಾಜ್ಯದ ಪಣಜಿಯಲ್ಲಿ ದಿ. ಶುಗರ್ ಟೆಕ್ನಾಲಜಿಸ್ಟ್ ಅಸೋಶಿಯೆಶನ್ ಆಫ್ ಇಂಡಿಯಾ ಆಯೋಜಿಸಿದ್ದ 80 ನೇ ವಾರ್ಷಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಸಕ್ಕರೆ ಎಕ್ಸ್ ಪೆÇೀ 2022 ರ ಅಂತಾರಾಷ್ಟ್ರೀಯ ಸಕ್ಕರೆ ಎಕ್ಸಪೆÇೀದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗೆ ಅತ್ಯುತ್ತಮ ಕೈಗಾರಿಕಾ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯನ್ನು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು,
ಈ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಭಾಗವಹಿಸಿದ್ದರು.

ಪ್ರಶಸ್ತಿ ಸ್ವೀಕರಿಸಿದ ಎಂ ಡಿ, ಶ್ರೀನಿವಾಸ ಪಾಟೀಲ ಅವರು ಈ ಸಂದರ್ಭದಲ್ಲಿ ಮಾತನಾಡಿ ಈ ಪ್ರಶಸ್ತಿ ಲಭಿಸಿದ್ದು, ತುಂಬಾ ಸಂತೋಷದ ವಿಷಯ. ಗೋವಾದ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಚಿವರ ಶುಭ ಹಸ್ತದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು ನಮ್ಮ ಸೌಭಾಗ್ಯ, ನಾನು ಎಲ್ಲ ಗೌರವಾನ್ವಿತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ನಮ್ಮ ಕಾರ್ಖಾನೆಗೆ ಅತ್ಯುತ್ತಮ ಶ್ರೇಷ್ಠ ಕೈಗಾರಿಕಾ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣಿಕರ್ತರಾದ ನಮ್ಮ ಕಾರ್ಖಾನೆಯ ಎಲ್ಲ ಆಡಳಿತ ಮಂಡಳಿಯವರಿಗೆ, ಎಲ್ಲಾ ವಿಭಾಗದ ಅಧಿಕಾರಿ ವರ್ಗದವರಿಗೆ, ಕಾರ್ಮಿಕ ಬಂಧುಗಳಿಗೆ ಮತ್ತು ಯಾವತ್ತೂ ಕಾರ್ಖಾನೆಯ ಬೆನ್ನೆಲುಬು ರೈತ ಬಾಂಧವರಿಗೊ ಕೂಡಾ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು,

ಈ ಸಮಯದಲ್ಲಿ ಎಸ್ ಟಿಎಆಯ್, ಅಧ್ಯಕ್ಷ ಸಂಜಯ್ ಅವಸ್ಥಿ, ನಿರ್ದೇಶಕ ಎನ್.ಎಸ್.ಐ. ನರೇಂದ್ರ ಮೋಹನ್ ಹಾಗೂ ಶುಗರ್ ಇಂಡಸ್ಟ್ರೀಸ್ ವಲಯದ ಗಣ್ಯರು, ಹಲವು ರಾಜ್ಯಗಳ ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಲವಾರು ತಂತ್ರಜ್ಞರು ಸೇರಿದಂತೆ ಅನೇಕರು ಉಪಸ್ಥಿರಿದ್ದರು


ನಮ್ಮ ಕಾರ್ಖಾನೆಯು ಅತ್ಯುತ್ತಮ ಶ್ರೇಷ್ಠ ಕೈಗಾರಿಕಾ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣಿಕರ್ತರಾದ ನಮ್ಮ ಕಾರ್ಖಾನೆಯ ಎಲ್ಲ ಆಡಳಿತ ಮಂಡಳಿಯವರಿಗೆ, ಎಲ್ಲಾ ವಿಭಾಗದ ಅಧಿಕಾರಿ ವರ್ಗದವರಿಗೆ, ಕಾರ್ಮಿಕ ಬಂಧುಗಳಿಗೆ ಮತ್ತು ಯಾವತ್ತೂ ಕಾರ್ಖಾನೆಯ ಬೆನ್ನೆಲುಬು ರೈತ ಬಾಂಧವರಿಗೆ ಧನ್ಯವಾದಗಳು,

        ಶ್ರೀನಿವಾಸ ಪಾಟೀಲ
     ವ್ಯವಸ್ಥಾಪಕ ನಿರ್ದೇಶಕರು