ಅಥಣಿ ಟಿಕೇಟ್ ನಿರ್ಧಾರ ಹೈಕಮಾಂಡ್‍ನದು : ರಮೇಶ್

ಹುಬ್ಬಳ್ಳಿ, ಮಾ 26: ಅಥಣಿ ಕ್ಷೇತ್ರದ ಬಿಜೆಪಿ ಟಿಕೇಟ್ ಹಂಚಿಕೆ ವಿಷಯವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿಂದು ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆದರ್ಶನಗರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುಧೀರ್ಘ ಸಂಭಾಷಣೆ ನಡೆಸಿ ಹೊರಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೀಸಲಾತಿ ನೀಡಿಕೆ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಸದ್ಯ ಮೀಸಲಾತಿ ನೀಡಿರುವುದು ಉತ್ತಮ ನಿರ್ಣಯ, ನಾವು ಹಿಂದುಳಿದವರ ಮೀಸಲಾತಿಯನ್ನು ಕಸಿದುಕೊಂಡಿಲ್ಲ ಎಂದವರು ಚುಟುಕಾಗಿ ನುಡಿದರು.