ಅಥಣಿ ಜಿಲ್ಲೆ ಮತ್ತು ಐಗಳಿ ತಾಲೂಕು ಎಂದು ಘೋಷಿಸುವಂತೆ, ಐಗಳಿ ಗ್ರಾಮಸ್ಥರಿಂದ ರಾಜ್ಯ ಸರ್ಕಾರಕ್ಕೆ ಮನವಿ

ಅಥಣಿ: ಡಿ.9:ಆಡಳಿತಾತ್ಮಕ ದೃಷ್ಟಿಯಿಂದ ಅಥಣಿ ಪಟ್ಟಣವನ್ನ ಜಿಲ್ಲಾ ಕೇಂದ್ರವನ್ನಾಗಿ ಹಾಗೂ ಪೂರ್ವ ಭಾಗದ ಪ್ರಮುಖ ಗ್ರಾಮವಾಗಿರುವ ಕೈಗಡಿಯನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಶುಕ್ರವಾರ ಅಥಣಿ ತಹಸೀಲ್ದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರನ್ನು ಇಬ್ಬರು ಸಂಸದರನ್ನು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿರುವ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಆದ್ದರಿಂದ ಈ ಜಿಲ್ಲೆಯನ್ನ ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸಿ ಐಗಳಿಯನ್ನು ತಾಲೂಕಾ ಕೇಂದ್ರವನ್ನಾಗಿ ಪರಿವರ್ತಿಸಲು ಅತ್ಯಂತ ಸೂಕ್ತವಾದ ಸ್ಥಳವಾಗಿದ್ದು, ಈ ಗ್ರಾಮದ ಸುತ್ತಮುತ್ತಲಿನ 15 ಕಿ.ಮೀ ಅಂತರದಲ್ಲಿ 28 ಗ್ರಾಮಗಳನ್ನು ಹೊಂದಿದೆ. ಆಡಳಿತಾತ್ಮಕವಾಗಿ ಎಲ್ಲರಿಗೆ ಹೋಗಿ ಬರಲು ಅತ್ಯಂತ ಸೂಕ್ತ ಸ್ಥಳವಾಗಿರುವುದರಿಂದ ಐಗಳಿಯನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಯುವ ಮುಖಂಡ ಶಿವಾನಂದ ಸಿಂಧೂರ ಮಾತನಾಡಿ ಅಥಣಿ ತಾಲೂಕಿನ ಪೂರ್ವಭಾಗದಲ್ಲಿರುವ ಐಗಳಿ ಗ್ರಾಮ ಸು.15 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ. ಇಲ್ಲಿ ಪೆÇಲೀಸ್ ಠಾಣೆ, ಹೆಸ್ಕಾಂ ಉಪಕಚೇರಿ, ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಶಾಖೆ, ರಾಷ್ಟ್ರೀಕೃತ ಬ್ಯಾಂಕು ಸೇರಿದಂತೆ ಅನೇಕ ಸಹಕಾರಿ ಸಂಘಗಳನ್ನು ಹೊಂದಿದೆ. ಸುತ್ತಮುತ್ತಲಿನ ಸುಮಾರು ಇಪ್ಪತೆಂಟು ಗ್ರಾಮಸ್ಥರಿಗೆ ಹೋಗಿ ಬರಲು ಸೂಕ್ತವಾದ ಸ್ಥಳವಾಗಿದೆ. ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆ ಮಾಡಿ ಅಥಣಿಯನ್ನು ತಾಲೂಕ ಚಂದ್ರವನ್ನಾಗಿ ಪರಿವರ್ತಿಸಬೇಕು. ಅದರ ಜೊತೆಗೆ ತಾಲೂಕಿನ ಪೂರ್ವ ಭಾಗದ ಪ್ರಮುಖ ಹಳ್ಳಿಯಾಗಿರುವ ಐಗಳಿ ಯನ್ನು ತಾಲೂಕು ಎಂದು ಘೋಷಿಸಬೇಕೆಂದು ಅಗ್ರಹಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲೂಕಾಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಬೆಳಗಾವಿ ಜಿಲ್ಲಾ ಕೇಂದ್ರವು ಅಥಣಿ ಭಾಗದ ಗಡಿ ಗ್ರಾಮಸ್ಥರಿಗೆ ಸು.200 ಕಿಲೋಮಿಟರ್ ದೂರದಲ್ಲಿರುವುದರಿಂದ ಸರ್ಕಾರಿ ಕಚೇರಿಗಳಿಗೆ ಹೋಗಿ ಬರಲು ಬಹಳಷ್ಟು ತೊಂದರೆಯಾಗುತ್ತಿದೆ. ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಅಥಣಿ ತಾಲೂಕಿನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಮತ್ತು ಪೂರ್ವ ಭಾಗದ ಐಗಳಿ ಗ್ರಾಮವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡುವುದು ಅತಿ ಅವಶ್ಯಕವಾಗಿದೆ. ಬರುವ ಸೋಮವಾರ ದಿನಾಂಕ 11 ರಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದ್ದು, ಈ ಹೋರಾಟದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸುವ ಮೂಲಕ ಜಿಲ್ಲಾ ಹೋರಾಟಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗುರಪ್ಪ ಬಿರಾದಾರ, ಯಲ್ಲಪ್ಪ ಮಿರ್ಜಿ, ಬಸವರಾಜ ಬಿರಾದಾರ, ಅಣ್ಣಾರಾಯ ಹಾಲಳ್ಳಿ, ಅಪ್ಪು ಪಾಟೀಲ, ಶಿವಾನಂದ ಸಿಂಧೂರ, ಬಂದೇನಮಾಜ ಮುಜಾವರ, ಪ್ರಭು ಬಿರಾದಾರ, ಸುರೇಶ ಬಿಜ್ಜರಗಿ, ಎ.ಎಸ್. ತೆಲಸಂಗ, ಪ್ರಹ್ಲಾದ ಪಾಟೀಲ, ಸಿದ್ದಪ್ಪ ಬಳೊಳ್ಳಿ, ಭೀಮಗೌಡಾ ಪಾಟೀಲ, ಪ್ರಕಾಶ ಹಿಪ್ಪರಗಿ, ಆಕಾಶ ಮಾದರ, ಬರಮು ಬಿಜ್ಜರಗಿ, ಮುತ್ತು ತೆಲಸಂಗ, ಬಸಯ್ಯ ಹಿರೇಮಠ, ದುಂಡಪ್ಪ ನಾವಿ, ಬೈರು ಬಿಜ್ಜರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.