
ಅಥಣಿ : ಮಾ.7:ಅಂತರಾಷ್ಟೀಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ ಇದೇ ಬುಧವಾರ ದಿ. 08 ರಂದು ಅಥಣಿಯ ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಅಥಣಿ ಜಾಗೃತಿ ಕೇಂದ್ರ (ರಿ) ಅಥಣಿ. ವತಿಯಿಂದ ಆಹಾರ ಮೇಳ ಹಾಗೂ ಮಹಿಳೆಯರಿಂದ ತಯಾರಿಸಲ್ಪಟ್ಟ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಅದ್ಯಕ್ಷೆ ಗೀತಾ ತೋರಿ ಹೇಳಿದರು.
ಇಂದು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಶ್ರೀಮತಿ ಶಶಿಕಲಾ ಜೊಲ್ಲೆ, ಸಚಿವರು ಹಜ್ ಮತ್ತು ವಕ್ಫ್ ಇಲಾಖೆ. ಇವರು ಉದ್ಘಾಟಿಸಲಿದ್ದು ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಅದ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ರೂಪಾ ಜಕನೂರ, ಪಿ ಎಸ್ ಆಯ್ ಹಾರೂಗೇರಿ. ಮಾಜಿ ಪುರಸಭೆ ಸದಸ್ಯೆ ಆಶಾ ದತ್ತಾ ವಾಸ್ಟರ, ವಿಜಯಪೂರದ ರಾಜಯೋಗಿಣಿ ಶೈಲಶ್ರೀ ಅಕ್ಕನವರು, ತೋಟಗಾರಿಖೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕುಮಾರಿ ಶ್ವೇತಾ ಹಾಡಕರ ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ರೋಹಿಣಿ ಯಾದವಾಡ ಮಾತನಾಡಿ ಸ್ವಾವಲಂಬಿ ಮಹಿಳೆಯರಿಗೆ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದರು. ಮಹಿಳಾ ಸದಸ್ಯೆ ಆರತಿ ನಂದೇಶ್ವರ ಮಾತನಾಡಿ ವಿವಿಧ ಕ್ಷೇತ್ರದಲ್ಲಿ ಮಹಿಳಾ ಸಾಧಕರಿಗೆ ಗೌರವ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಗಾಗಿ ಅಥಣಿಯ ಚಂದುಕಾಕಾ ಸರಾಫ ???ಂಡ್ ಸನ್ಸ ಪ್ರಾ.ಲಿ ವತಿಯಿಂದ ಲಕ್ಕಿ ಡ್ರಾ ಇಟ್ಟುಕೊಂಡಿದ್ದು ವಿಜೇತರಿಗೆ ಅಲ್ಲಿಯೇ ಬಹುಮಾನ ಅವರ ಸಂಸ್ಥೆ ಯಿಂದ ನೀಡಲಿದ್ದಾರೆ ಎಂದು ತಿಳಸಿದರು.
ಈ ವೇಳೆ ಶ್ವೇತಾ ಅಣೆಪ್ಪನವರ, ಅರ್ಚನಾ ಭೂಸನೂರ, ಗಿರಿಜಾ ಮಡಿಕೇಶ್ವರ, ಭಾರತಿ ಅಲಿಬಾದಿ, ಉಜ್ವಲಾ ಬಳ್ಳೊಳ್ಳಿ, ಗೀತಾ ಚೌಧರಿ, ಜಯಶ್ರೀ ಪೂಜಾರಿ, ಮನಿಷಾ ಅಲಿಬಾದಿ ಸೇರಿದಂತೆ ಅನೇಕರಿದ್ದರು.