ಅಥಣಿಯ ಸಂದೀಪ ಕುಲಕರ್ಣಿ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ

ಅಥಣಿ: ಜು.6:ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಅಥಣಿ ಪಟ್ಟಣದ ವಿದ್ಯಾನಗರ ನಿವಾಸಿ ಅರವಿಂದ ಹಾಗೂ ಅರುಣಾ ಕುಲಕರ್ಣಿ ಅವರ ಪುತ್ರ ಸಂದೀಪ ಅರವಿಂದ ಕುಲಕರ್ಣಿ ಉತ್ತಮ ಅಂಕ ಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಅಥಣಿ ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿ ವಾಣಿಜ್ಯ ಪದವಿ ಶಿಕ್ಷಣವನ್ನು ಬೆಳಗಾವಿಯ ಗೋಕಟೆ ಮಹಾವಿದ್ಯಾಲಯದಲ್ಲಿ ಪೂರೈಸಿ, ಸಿ.ಎ ಆಗುವ ಕನಸು ಹೊಂದಿದ್ದ ಸಂದೀಪ ಕುಲಕರ್ಣಿ ಬೆಂಗಳೂರಿನ ಕೆ. ಜಿ. ಆಚಾರ್ಯ ಅಂಡ್ ಕಂಪನಿಯಲ್ಲಿ ಸತತ ಮೂರು ವರ್ಷ ತರಬೇತಿ ಪಡೆದುಕೊಂಡು ಈ ಬಾರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂದೀಪ ಕುಲಕರ್ಣಿ ಅವರಿಗೆ ಅವರ ಸಂಬಂಧಿಕರು, ಸ್ನೇಹಿತರು, ಶಿಕ್ಷಕರು ಶುಭಾಶಯಗಳನ್ನು ಕೋರಿದ್ದಾರೆ.