ಅಥಣಿಯಲ್ಲಿ ವಿಶ್ವಕರ್ಮ ಜಯಂತಿ ಸಂಭ್ರಮದಿಂದ ಆಚರಣೆ

ಅಥಣಿ :ಸೆ.19: ತಾಲೂಕಾಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಅಥಣಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ದೇವಶಿಲ್ಪಿ ಶ್ರೀ ವಿಶ್ವಕರ್ಮ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು
ಬಿಜೆಪಿ ಯುವ ನಾಯಕ ಚಿದಾನಂದ ಸವದಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ತಹಶೀಲ್ದಾರ ಸುರೇಶ ಮುಂಜೆ, ಮುರುಗೇಶ ಕುಮಠಳ್ಳಿ. ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಬಡಿಗೇರ, ಸಮಾಜದ ಮುಖಂಡರಾದ ಸುಶೀಲ್‍ಕುಮಾರ ಪತ್ತಾರ, ಪ್ರಶಾಂತ ಬಡಿಗೇರ, ಕಾರ್ತಿಕ ಮಿರಜಕರ, ಮೌನೇಶ ಬಡಿಗೇರ, ಪ್ರಕಾಶ ಬಡಿಗೇರ, ಸುರೇಶ ಪೆÇೀತದಾರ, ಪ್ರದೀಪ ಬಡಿಗೇರ ಸೇರಿದಂತೆ ಹಲವು ಗಣ್ಯಮಾನ್ಯರು, ಗುರು-ಹಿರಿಯರು, ವಿಶ್ವಕರ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.