ಅಥಣಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಪಂಚಮಸಾಲಿ ಸಮುದಾಯ

ಅಥಣಿ :ಮಾ.5: ಪಂಚಮಸಾಲಿ ಸಮುದಾಯಕ್ಕೆ 2ಂ ಮೀಸಲಾತಿಯ ಸಲುವಾಗಿ ಬಸವಜಯ ಮೃತುಂಜಯ ಶ್ರೀಗಳು 2 ವರ್ಷಗಳ ನಿರಂತರ ಹೋರಾಟ ನಡೆಸುತ್ತಿದ್ದಾರೆ, ಸರಕಾರ 6 ಬಾರಿ ಭರವಸೆ ನೀಡಿ ಕೊನೆಗೆ ಮೀಸಲಾತಿ ನೀಡದೆ ಮಾತು ತಪ್ಪಿ ಪಂಚಮಸಾಲಿಗಳ ಕೆಂಗಣ್ಣಿಗೆ ಗುರಿಯಾಗಿದೆ, ಮಾತುತಪ್ಪಿದ ಸರಕಾರಕ್ಕೆ ತಕ್ಕ ಪಾಠ ಕಲಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಿ ಎಂದು ಹಿರಿಯ ಮುಖಂಡ ರಮೇಶಗೌಡ ಪಾಟೀಲ ಅವರು ಹೇಳಿದರು.

ಅವರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಂಬೇಡ್ಕರ್ ವೃತ್ತದವರೆಗೂ ಪಾದಯಾತ್ರೆ ಮೂಲಕ ಬಂದು, ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಣೆ ಮಾಡಿ ಮಾತನಾಡುತ್ತಾ ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೈಗೊಂಡ ನಿರಂತರ ಧರಣಿ ಸತ್ಯಾಗ್ರಹ ಮಾರ್ಚ್ 4 ರಂದು 50ನೇ ದಿನಕ್ಕೆ ಕಾಲಿಡುತ್ತಿದೆ, ಈ ಹಿನ್ನಲೆಯಲ್ಲಿ ಶ್ರೀಗಳ ಆದೇಶದ ಮೇರೆಗೆ ರಾಜ್ಯದಾದ್ಯಂತ ರಸ್ತೆ ತಡೆದು ಪ್ರತಿಭಟನೆ ಮಾಡಿ ಎಚ್ಚರಿಕೆಯನ್ನು ರವಾನಿಸಿದ್ದೇವೆ ಎಂದರು.

ಅನಂತರ ಮಾತನಾಡಿದ ಮುಖಂಡ ಶಶಿಕಾಂತ ಪಡಸಲಗಿ, ನಮ್ಮ ಸಮಾಜದ ಮೀಸಲಾತಿಗೆ ಕೆಲವರು ವಿರೋಧ ಮಾಡ್ತಿದ್ದಾರೆ, ಪಂಚಮಸಾಲಿ ಸಮಾಜ ಮನಸ್ಸು ಮಾಡಿದರೇ ಮೀಸಲಾತಿಗೆ ವಿರೋಧ ಮಾಡಿದ ನಾಯಕರುಗಳು ಮನೆಗೆ ಹೋಗ್ತಾರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ತಾಯಿ ಮೇಲೆ ಪ್ರಮಾಣ ಮಾಡಿ ಮೀಸಲಾತಿ ಕೊಡ್ತೀವಿ ಎಂದು ಮಾತುಕೊಟ್ಟು ತಪ್ಪಿದ್ದಾರೆ, ಅದೇ ರೀತಿ ಯಡಿಯೂರಪ್ಪ, ಜಗದೀಶ ಶೆಟ್ಟರ, ಸದಾನಂದಗೌಡ, ಬಸವರಾಜ ಬೊಮ್ಮಾಯಿ ಅವರು ಮೋಸ ಮಾಡಿದ್ದಾರೆ, ನಮ್ಮ ಸಮಾಜದ ಗಟ್ಟಿ ಧ್ವನಿಯಾದ ಬಸನಗೌಡ ಯತ್ನಾಳ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟು ನೋಡಿ ಅವರು ಏನು ಎಂಬುವುದನ್ನು ತೋರಿಸ್ತಾರೆ, ಅಥಣಿ ಮತಕ್ಷೇತ್ರದಲ್ಲಿ ಸಮಾಜ ಗಟ್ಟಿಯಾದರೆ ಏನಾದ್ರೂ ಆಗುತ್ತೆ ಎಂದು ಗೊಂದಲ ಹುಟ್ಟಿಸಿದವರ ಹುಟ್ಟಡಗಿಸಿ ಬಿಡ್ತೀವಿ ಎಂದರು.

ಒಂದು ಗಂಟೆ ಕಾಲ ಪಟ್ಟಣದ ಮುಖ್ಯ ರಸ್ತೆ ಜೆವರ್ಗಿ ಸಂಕೇಶ್ವರ ಹೆದ್ದಾರಿ ಬಂದ ಮಾಡಿದ್ದರಿಂದ ಸಂಚರಾ ವ್ಯತ್ಯವಾಯಿತು .

ಅನಂತರ ಕಾಂಗ್ರೇಸ್ ಮುಖಂಡ ಗಜಾನನ ಮಂಗಸೂಳಿ ಅವರು ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು, ಮುಂಖಡರಾದ ಡಿ ಬಿ ಠಕ್ಕಣ್ಣವರ ಅಶೋಕ ಜಗದೇವ, ಸಮಾಜದ ಅಧ್ಯಕ್ಷ ಅವಿನಾಶ ನಾಯಿಕ ಅವರು ಮಾತನಾಡಿದರು. ಈ ವೇಳೆ ಯುವ ಘಟಕದ ಅಧ್ಯಕ್ಷ ಪರಶುರಾಮ ನಂದೇಶ್ವರ, ನಗರ ಘಟಕದ ಅಧ್ಯಕ್ಷ ಸುನೀಲಗೌಡ ಪಾಟೀಲ, ಮುರಗೇಶ ಕುಮಠಳ್ಳಿ ,ಬಸವರಾಜ ಠಕ್ಕಣ್ಣವರ , ಮುತ್ತಣ್ಣ ಸಂತಿ, ಬಸವರಾಜ ಪಾಟೀಲ, ಪ್ರಮೋದ ಬಿಳ್ಳೂರ, ದುಂಡಪ್ಪ ಅವಟಿ, ಶಿವು ಸಿಂಧೂರ, ಶಿವು ನೇಮಗೌಡ, ಮಲ್ಲಪ್ಪ ಹಂಚಿನಾಳ, ಬಸವಂತ ಗುಡ್ಡಾಪೂರ, ಮಹೇಶಗೌಡ ಪಾಟೀಲ, ಸಂಗಮೇಶ ಇಂಗಳಿ, ಪ್ರಕಾಶ ಚನ್ನಣ್ಣವರ, ಸಂಜು ವಾಂಗಿ, ಮಲ್ಲಿಕಾರ್ಜುನ ಅಂದಾನಿ , ಕಲಾವತಿ ಕಿತ್ತೂರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಬಾಗಿಯಾಗುದ್ದರು .