ಅತ್ಯುತ್ತಮ ಸೋಗಿನ ಗಾಡಿಗಳ ಬಹುಮಾನ ವಿತರಣಿ

ಬಾಗಲಕೋಟೆ,ಮಾ13: ಇಲ್ಲಿಯ ಐತಿಹಾಸಿಕ ಹೋಳಿಹಬ್ಬದ ಪ್ರಯುಕ್ತ ಹಮ್ಮಿಕೊಳ್ಳುವ ಸೋಗಿನ ಗಾಡಿಗಳಿಗೆ ಪೆÇ್ರೀತ್ಸಾಹಿಸುವ ಉದ್ದೇಶದಿಂದ ಈ ವರ್ಷ ಐದು ಓಣಿಗಳಲ್ಲಿ ಮಾಡುವ ಉತ್ಕೃಷ್ಟ ಸೋಗಿನ ಗಾಡಿಗಳೆಗೆ ಬಹುಮಾನ ನೀಡಲು ನಗರದ ಸರಾಫ ವ್ಯಾಪಾರಸ್ಥರಾದ ಭಗವಾನದಾಸ ಬಾರ್ಶಿಯವರು ನಿರ್ಧರಿಸಿ ಅದರಂತೆ ಕಿಲ್ಲಾ, ಹಳಪೇಟ, ಹೊಸಪೇಟೆ ಹಾಗೂ ಜೈನಪೇಟೆಯ ಓಣಿಯವರು ಸೋಗಿನ ಗಾಡಿಗಳನ್ನು ಮಾಡಿದ್ದರು.
ಉತ್ಕೃಷ್ಟ ಸೋಗಿನ ಗಾಡಿಗಳಿಗೆ ರವಿವಾರ ಸಂಜೆ ಕಿಲ್ಲಾ ಕೊತ್ತಲೇಶ ಮಂಗಲ ಭವನದಲ್ಲಿ ಹೋಳಿಹಬ್ಬದ ಆಚರಣಾ ಸಮಿತಿಯ ಅಧ್ಯಕ್ಷರಾದ ಕಳಕಪ್ಪ ಬಾದೋಡಗಿಯವರ ಅಧ್ಯಕ್ಷತೆಯಲ್ಲಿ ವಿಜೇತ ತಂಡದವರಿಗೆ ಬಹುಮಾನ ವಿತರಿಸಲಾಯಿತು.
ಹೊಸಪೇಟೆ ಓಣಿಯ ಕೌಲಪೇಟ ಬಸವೇಶ್ವರ ಭಜನಾ ಮಂಡಳಿ ಕೃಷ್ಣ ಅರ್ಜುನನ ಸೋಗಿಗೆ ಪ್ರಥಮ ಬಹುಮಾನ.
ನರೇಂದ್ರ ಯುವಕ ಮಂಡಳ ಕಿಲ್ಲಾ ಭಗತ್ ಸಿಂಗ, ರಾಜಗುರು, ಸುಖದೇವ ಸೋಗಿಗೆ 2ನೇ ಬಹುಮಾನ ವಿಕ್ರಮ್ ಯುವಕ ಮಂಡಳಿ ಕಿಲ್ಲಾ ಸಮರ್ಥ ರಾಮದಾಸರು ಮತ್ತು ಛತ್ರಪತಿ ಶಿವಾಜಿ ಮಹಾರಾಜ ಸೋಗಿಗೆ 3ನೇ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸರಾಫ ವ್ಯಾಪಾರಸ್ಥ ದಿನೇಶ ಬಾರ್ಶಿಯವರು ನಮ್ಮ ಹೋಳಿಹಬ್ಬಕ್ಕೆ ಸೋಗಿನ ಗಾಡಿಗಳಿಗೆ ವೈಶಿಷ್ಟ್ಯವಿದೆ ನಮ್ಮ ಪರಂಪರೆ ನಶಿಸಿ ಹೋಗಬಾರದು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಭಗವಾನದಾಸ ಬಾರ್ಶಿ ಯವರ ಹೆಸರಿನಲ್ಲಿ ಬಹುಮಾನ ನೀಡುತ್ತೇವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಜವಾರಿ ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಶವಗಳ ಮುಂದೆ ಅಳುವ ಸ್ಪರ್ಧೆಯಲ್ಲಿ ವಿಜೇತರಾದ ಜಯಶ್ರೀ ಗುಳಬಾಳ ಬಹುಮಾನ ನೀಡಲಾಯಿತು, ಮಹಾಬಳೇಶ್ವರ ಗುಡಗುಂಟಿ, ಸಂಜೀವ ವಾಡಕರ, ನಾಗರಾಜ ಹದ್ಲಿ, ಪ್ರವೀಣ ಖಾತೆದಾರ ಸುರೇಶ ಮಜ್ಜಗಿ, ಈರಣ್ಣ ಕಲ್ಬುರ್ಗಿ, ಮಡಿವಾಳ ವಕೀಲರು, ಶ್ರೀನಿವಾಸ ಸಜ್ಜನ, ರಘು ಯಾದಗಿರಿ, ರಾಜು ನಾಯ್ಕರ, ವಿಜಯ ಮುಳ್ಳುರ, ಸಿದ್ರಾಮ ಝಿಂಗಡೆ, ನಾಗರಾಜ ಬಾರಕೇರ ಮುಂತಾದವರು ಭಾಗವಹಿಸಿದ್ದರು.