ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಗೌರವ :

ಶಿವಮೊಗ್ಗ.ಸೆ.೨೩; ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯವು ಇತ್ತೀಚೆಗೆ ನಡೆದ ವಿವಿಯ 9ನೇ ಸಂಸ್ಥಾಪನಾ ದಿನಾಚರಣೆಯಂದು ವಿವಿಯ ಪ್ರಾಧ್ಯಾಪಕ ಡಾ|| ನಾಗರಾಜಪ್ಪ ಅಡಿವೆಪ್ಪ ಅವರಿಗೆ ಪ್ರಸಕ್ತ ಸಾಲಿನ ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಾಧ್ಯಾಪಕ ಡಾ|| ನಾಗರಾಜಪ್ಪಅಡಿವಪ್ಪರ, ಅವರು ಬಿ.ಎಸ್ಸಿ.(ತೋಟಗಾರಿಕೆ), ಎಂ.ಎಸ್ಸಿ.(ತೋಟಗಾರಿಕೆ) ಪದವಿಯಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ, ಪಿ.ಎಚ್.ಡಿ.(ತೋಟಗಾರಿಕೆ) ಪದವಿಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ, ಮ್ಯಾನೇಜ್, ಹೈದರಾಬಾದಿನಿಂದ ಕೃಷಿ ವಿಸ್ತರಣೆಯಲ್ಲಿ ಪಿ.ಜಿ. ಡಿಪ್ಲೋಮಾವನ್ನು ಹಾಗೂ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗದಿಂದ ಹಾಗೂ ಭೌದಿಕ ಆಸ್ತಿ ಹಕ್ಕುಗಳಲ್ಲಿ ಪಿ. ಜಿ. ಡಿಪ್ಲೋಮಾವನ್ನು ಪಡೆದಿದ್ದಾರೆ.  ಏಪ್ರಿಲ್-2006 ರಿಂದ ಜುಲೈ-2009 ರವರೆಗೆ ಕೇಂದ್ರ ಸರ್ಕಾರದ ಕೃಷಿ ವಿಮಾ ಕÀಂಪÀನಿಯಲ್ಲಿ ಆಡಳಿತಾಧಿಕಾರಿಯಾಗಿ, ಜುಲೈ 2009 ರಿಂದ ಜುಲೈ 2015 ರವರೆಗೆ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗದಲ್ಲಿ ತೋಟಗಾರಿಕೆ ವಿಷಯ ತಜ್ಞರಾಗಿ, ಜುಲೈ 2015 ರಿಂದ ಇಲ್ಲಿಯವರೆಗೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ(ತೋಟಗಾರಿಕೆ), ಅಲ್ಲದೆ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ(ತಾಳೆ ಬೆಳೆ) ಹಾಗೂ ಅಡಿಕೆ ಸಂಶೋಧನಾ ಕೇಂದ್ರÀ, ಶಿವಮೊಗ್ಗದ ಪ್ರಧಾನ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 27 ಕೋರ್ಸ್ಗಳನ್ನು ಭೋದಿಸಿ, 12 ಎಂ.ಎಸ್ಸಿ. ವಿದ್ಯಾಥಿಗಳಿಗೆ ಮಾರ್ಗದರ್ಶಕರಾಗಿ, 200 ಕ್ಕೂ ಹೆಚ್ಚು ತರಬೇತಿಗಳನ್ನು, 175 ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿದ್ದಾರೆ. ರೂ. 25 ಲಕ್ಷ ಮೌಲ್ಯದ ತೋಟಗಾರಿಕಾ ಕಸಿ/ಸಸಿ ಗಿಡಗಳನ್ನು ಉತ್ಪಾದÀನೆೆ ಮಾಡಿ ಮಾರಾಟ ಮಾಡಿದ ಅನುಭವ ಹೊಂದಿರುತ್ತಾರೆ.  ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಜರ್ನಲ್‌ಗಳಲ್ಲಿ 30 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 4 ತೋಟಗಾರಿಕಾ ತಂತ್ರಜ್ಞಾನ ಬಿಡುಗಡೆಯಲ್ಲಿ ಮುಖ್ಯ ಸಂಶೋಧಕರಾಗಿ, ತರಕಾರಿ ಜೆಳೆಗಳ 6 ತಳಿ ಹಾಗೂ 3 ತೋಟಗಾರಿಕಾ ತಂತ್ರಜ್ಞಾನ ಬಿಡುಗಡೆಯಲ್ಲಿ ಸಹಸಂಶೋಧಕರಾಗಿದ್ದಾರೆ.35 ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಸಮ್ಮೇಳನೆಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ರಾಷ್ಟçಮಟ್ಟದ ಸಮ್ಮೇಳನಗಳಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧ ಮಂಡನೆಗಾಗೆ 2 ಬಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. 2 ರಾಷ್ಟçಮಟ್ಟದ ಹಾಗೂ 4 ರಾಜ್ಯಮಟ್ಟದ ಸಮ್ಮೇಳನ/ ಗೋಷ್ಠಿಗಳಲ್ಲಿ ಸಂಘಟನಾ ಹಾಗೂ ಸಹ ಸಂಘಟನಾ ಕರ‍್ಯದರ್ಶಿಯಾಗಿ ಯಶಸ್ವಿಗೊಳಿಸಿದ್ದಾರೆ. 165 ತರಬೇತಿ, ಸಮ್ಮೇಳನ ಹಾಗೂ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ 6 ತಾಂತ್ರಿಕ ಸಮಿತಿಗಳಲ್ಲಿ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ. ರೂ. 5.03 ಕೋಟಿ ಮೌಲ್ಯದ ಪ್ರಾಯೋಜನೆಗಳನ್ನು ಪ್ರಧಾನ ಹಾಗೂ ಉಪಸಂಶೋಧಕರಾಗಿ ಕರ‍್ಯ ನಿರ್ವಹಿಸಿದ್ದಾರೆ. ಉತ್ತಮ ಸೇವೆಗಾಗಿ 2011-12ರಿಂದ 2014-15ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 3 ಬಾರಿ ಸರ್ಟಫಿಕೆಟ್‌ಆಫ್ ಮೇರಿಟನ್ನು ಹಾಗೂ 2016-17ರಲ್ಲಿ ಕೃಷಿ ಮತ್ತುತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಿಂದ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿಯನ್ನು ಪಡೆದಿರುತ್ತಾರೆ