ಅತ್ಯುತ್ತಮ ಚಾಲಕ ಪ್ರಶಸ್ತಿ ಅಂಬಳಿ ಮಲ್ಲಿಕಾರ್ಜುನ

ಕೊಟ್ಟೂರು ನ 02 :ಈಶಾನ್ಯ ರಸ್ತೆ ಸಾರಿಗೆ ಸಂಸ್ಥ ಹೊಸಪೇಟೆ ವಿಭಾಗ ಕೂಡ್ಲಿಗಿ ಘಟಕದ
ಕೊಟ್ಟೂರಿನ ಚಾಲಕ ಅಂಬಳಿ ಮಲ್ಲಿಕಾರ್ಜುನ ಇವರಿಗೆ 2018-19ನೇ ಸಾಲಿನಲ್ಲಿ ಉತ್ತಮ ಚಾಲಕರಾಗಿ ಕಾರ್ಯನಿರ್ವಹಿಸಿರುವುದ ರಿಂದ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗಣರಾಜ್ಯೋತ್ಸವ ದಿನದಂದು ಸನ್ಮಾನಮಾಡಿ ಗೌರವಿಸಿದರು.
ವಿಭಾಗಿಯ ನಿಯಂತ್ರಣಾಧಿಕಾರಿ ಸೀನಯ್ಯ, ಹಾಗೂ ಕೂಡ್ಲಿಗಿ ಘಟಕದಲ್ಲಿಯೂ ಸಹ ಘಟಕದ ವ್ಯವಸ್ಥಾಪಕ ದಯನಾಂದ, ಎಟಿಎಸ್ ಉಮಾಮಹೇಶ, ಚಂದ್ರಣ್ಣ, ಜಹಂಗೀರ್, ತೋಟಿಗರ ಕೊಟ್ರೇಶಸೇರಿದಂತೆ ಇತರರು ಮಲ್ಲಿಕಾರ್ಜುನ ಇವರಿಗೆ ಗೌರವ ಪೂರಕವಾಗಿ ಸನ್ಮಾನ ಮಾಡಿದರು.