
ಗದಗ, ಡಿ 6-ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಗದಗ ಜಿಲ್ಲೆಗೆ ಬ್ಯಾಡಗಿ ಕೆಂಪು ಮೆನಸಿನಕಾಯಿ ಬೆಳೆಯನ್ನು ನಿಗದಿಪಡಿಸಲಾಗಿದ್ದು ರೈತರಿಗೆ ಹೆಚ್ಚು ಬೆಳೆ ಬೆಳೆಯಲು ಪೆÇ್ರೀತ್ಸಾಹ ನೀಡುವದರೊಂದಿಗೆ ಬೆಳೆದ ಬೆಳೆಯನ್ನು ಸಂಗ್ರಹಿಸಲು ಸೂಕ್ತ ಶಿಥಿಲೀಕರಣ ಘಟಕ ಸ್ಥಾಪನೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಅತ್ಯಾಧುನಿಕ ಸೌಲಭ್ಯಗಳ್ಳುಳ್ಳ ಅಧಿಕ ಸಾಮಥ್ರ್ಯದ ಶೀಥಿಲಿಕರಣದ ಘಟಕ ಸ್ಥಾಪನೆಗೆ ಮುಂದಾಗುವಂತೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.
ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತ್ಯಾಧುನಿಕ ಶೀಥೀಲಿಕರಣ ಘಟಕ ಸ್ಥಾಪನೆಯಿಂದಾಗಿ ರೈತರ ಬೆಳೆಗಳು ಸುರಕ್ಷಿತವಾಗಿ ಸಂಗ್ರಹಿಸಿಡಲು ಅನುಕೂಲವಾಗಲಿದೆ ಪಕ್ಕದ ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದಲ್ಲಿಯೇ ಅಧಿಕ ಸಾಮಥ್ರ್ಯದ ವೈಜ್ಞಾನಿಕ ಶಿಥಿಲೀಕರಣ ಘಟಕಗಳನ್ನು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಸ್ಥಳಕ್ಕೆ ಭೇಟಿ ಮಾಹಿತಿ ಸಂಗ್ರಹಿಸಿ ಜಿಲ್ಲೆಯಲ್ಲಿಯೂ ಅಂತಹುದೇ ಶಿಥಿಲೀಕರಣ ಘಟಕ ಆರಂಭಕ್ಕೆ ಕಾರ್ಯನಿರ್ವಹಿಸಬೇಕು ಎಂದರು.
ಕೇಂದ್ರ ಪುರಸ್ಕೃತ ಯೋಜನೆಯಡಿ ಜಿಲ್ಲೆಯಲ್ಲಿ 17 ಹೊಸ ಕೊಠಡಿ ಮುಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಮಳೆಯಿಂದ ಹಾನಿಗೊಳಗಾದ 280 ಶಾಲೆಗಳ ಕಟ್ಟಡಗಳ ದುರಸ್ಥಿಗಾಗಿ 15 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಇವುಗಳಲ್ಲಿ 272 ಶಾಲೆಗಳ ಕಾಮಗಾರಿ ಪ್ರಾರಂಭದಲ್ಲಿದೆ. ಅದರಲ್ಲಿ ಈಗಾಗಲೇ 11 ಕೋಟಿ ರೂ.ಬಿಡುಗಡೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮತ್ತೆ 220 ಶಾಲೆಗಳು ಮಳೆಯಿಂದ ಹಾನಿಗೊಳಗಾಗಿವೆ ಎಂದು ತಿಳಿಸಿದ ಡಿಡಿಪಿಐ ಬಸವಲಿಂಗಪ್ಪ ಅವರಿಗೆ ಮುಳಗುಂದ ಸಮೀಪದ ಸೀತಾಲಹರಿ ಶಾಲೆ ದುರಸ್ಥಿಗೊಳಿಸುವಂತೆ ಸಂಸದರು ಸೂಚಿಸಿದರು.
ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ದುರಸ್ಥಿಗೊಳಿಸಲು ಹಾಗೂ ಹೊಸ ಕಟ್ಟಡ ನಿರ್ಮಿಸಲು ನಬಾರ್ಡ್ ಯೋಜನೆಯಡಿ ಅನುದಾನ ಪಡೆಯುವಲ್ಲಿ ಬ್ಯಾಂಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಯೋಜನೆ ಸಿದ್ದಪಡಿಸಿ ಅನುದಾನ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದರು.
ಕೃಷಿ ಜಲಾನಯನ ಇಲಾಖೆಯಿಂದ 45 ಕೆರೆಗಳು, 49 ಹಳ್ಳಗಳನ್ನು 26 ಚೆಕ್ ಡ್ಯಾಂಗಳಲ್ಲಿ ಹೂಳೆತ್ತಲಾಗಿದೆ. ತೋಟಗಾರಿಕೆ ಇಲಾಖೆಯಿಂದ 299 ಜೊಸ ತೋಟಗಾರಿಕೆ ಪ್ರದೇಶ ವಿಸ್ತರಣೆ ಮಾಡಿ 75 ತೋಟಗಳನ್ನು ನಿರ್ಮಿಸಲಾಗಿದೆ. 15 ಈರುಳ್ಳಿ ಸಂಸ್ಕರಣಾ ಘಟಕಗಳ ನಿರ್ವಹಣೆ ಮಾಡಿದ್ದು, 3 ಅಲಂಕಾರಿಕ ಉದ್ಯಾನವನಗಳನ್ನು ನಿರ್ಮಿಸಿದೆ. ಅರಣ್ಯ ಇಲಾಖೆಯಿಂದ 167 ಕಿ.ಮೀ.ರಸ್ತೆ ಬದಿ ನೆಡತೋಪು, ನರ್ಸರಿಗಳಿಂದ 2.60ಲಕ್ಷ ಸಸಿ ವಿತರಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕವಾಗಿ 40 ಲಕ್ಷಮಾನವ ದಿನಗಳನ್ನು ಸೃಜಿಸಲು ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ ಜೂನ್ 12.83 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.88 ರಷ್ಟು ಗುರಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಕಲ್ಲೇಶ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಫಸಲ್ ಭೀಮಾ ಯೋಜನೆಯಡಿ ಕಟಾವು ಪ್ರಯೋಗಗಳ ಆಧಾರದ ಮೇಲೆ 9559 ರೈತರಿಗೆ 13.1 ಕೋಟಿ ರೂ. ವಿಮಾ ಮೊತ್ತ ಪಾವತಿಸಲಾಗಿದೆ. ಇನ್ನು ಹೂವು ಬೆಳೆಗಾರರಿಗೆ ಒಟ್ಟು 44.34 ಲಕ್ಷ ರೂ. ರೈತರ ಖಾತೆಗೆ ಜಮೆ ಮಾಡಲಾಗಿದೆ. ಅದರಂತೆ ಹೂವು ಮತ್ತು ತರಕಾರಿ ಬೆಳೆಗಾರರಿಗೆ ಸುಮಾರು 3 ಕೋಟಿ ರೂ. ಜಮೆ ಮಾಡಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷ ಈರಪ್ಪ ನಾಡಗೌಡ್ರ,ಸತೀಶಕುಮಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಆನಂದ ಕೆ ಅವರು ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಯೋಜನೆ ನಿರ್ದೇಶಕ ರುದ್ರೇಶ ಎಸ್.ಎನ್., ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.