ಅತ್ಯಾಧುನಿಕ ಶವಾಗಾರದ ಕೊರತೆ

ಕೆ.ಆರ್.ಪೇಟೆ, ನ.13: ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಲು ಕೇವಲ ಒಂದು ಬೆಡ್‍ನ ಹಳೆಯದಾದ ಶವಾಗಾರದ ಕಟ್ಟಡವನ್ನೇ ಇನ್ನೂ ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ಎರಡೂವರೆ ಲಕ್ಷ ಜನಸಂಖ್ಯೆ ಇದ್ದು ಇದಕ್ಕೆ ಸರಿಸಮನಾದ ಅತ್ಯಾಧುನಿಕ ಶವಾಗಾರದ ಕೊರತೆ ಇದೆ.
ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತವಾದ ಶವಾಗಾರದ ಅವಶ್ಯಕತೆ ಇದ್ದು 4-5 ಫ್ರೀಜರ್‍ಗಳು ಅವಶ್ಯಕವಾಗಿ ಬೇಕಾಗಿವೆ. ಶವಾಗಾರಕ್ಕೆ ಸಾಮಾನ್ಯವಾಗಿ ನೀರಿಗೆ ಬಿದ್ದ ಶವಗಳು. ಅನಾಥ ಶವಗಳು, ಅಪಘಾತದ ಶವಗಳು, ಕೊಲೆಯಾದ ಶವಗಳು, ಬೆಂಕಿಯಿಂದ ಸುಟ್ಟ ಶವಗಳು ಹೀಗೆ ತರಾವರಿ ಶವಗಳು ಬರುತ್ತಿದ್ದು ಸದರಿ ಶವಗಳನ್ನು ಶೇಖರಣೆ ಮಾಡಲು ಫ್ರೀಜರ್‍ಗಳು ಬೇಕಾಗಿವೆ, ಅದರಲ್ಲೂ ಅನಾಥ ಶವಗಳನ್ನು ಪಡೆಯಲು ವಾರಸುದಾರರು ಬಾರದೇ ಹೋದಲ್ಲಿ ಸುಮಾರು 4-5 ದಿನಗಳ ವರೆಗೆ ಶವಾಗಾರದಲ್ಲಿಯೇ ಶವಗಳನ್ನು ಇಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಶವಾಗಾರದಲ್ಲಿ ಒಂದೇ ಒಂದು ಬೆಡ್ ಇದ್ದು ಏಕಕಾಲದಲ್ಲಿ 2-3 ಅದಕ್ಕೂ ಹೆಚ್ಚಿನ ಶವಗಳು ಬಂದರೆ ಅವುಗಳನ್ನು ನೆಲದ ಮೇಲೆ ಇಟ್ಟಿರುವ ನಿದರ್ಶನಗಳಿವೆ,
ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಲು ಖಾಯಂ ಗ್ರೂಪ್ ಡಿ ಸಿಬ್ಬಂದಿ ಇಲ್ಲದಿರುವುದು ಸಾಕಷ್ಟು ಬಾರಿ ಮರಣೋತ್ತರ ಪರೀಕ್ಷೆ ಮಾಡಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಮಾರಪ್ಪನವರು ವಯೋನಿವೃತ್ತಿ ಹೊಂದಿ ಐದು ವರ್ಷಗಳು ಕಳೆದಿದ್ದರೂ ಅವರ ಸೇವೆಯನ್ನೇ ಇಂದಿಗೂ ಬಳಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸುತ್ತಿರುವುದು ವಿಪರ್ಯಾಸ, ಸದರಿ ಕೆಲಸಕ್ಕೆ 2-3 ಖಾಯಂ ನೌಕರರÀನ್ನು ನೇಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 18 ಗ್ರೂಪ್ ಡಿ ನೌಕರರು ಕೆಲಸ ಮಾಡುತ್ತಿದ್ದು ಅವರುಗಳ ಪೈಕಿ 3-5 ಜನರಿಗೆ ವೈದ್ಯರು ಮತ್ತು ಮಾರಪ್ಪನವರು ಶವಪರೀಕ್ಷೆಯ ಬಗ್ಗೆ ತರಬೇತಿ ನೀಡುತ್ತಿದ್ದು, ಅವರುಗಳು ಶವಪರೀಕ್ಷೆಗೆ ಅಷ್ಟಾಗಿ ಆಸಕ್ತಿ ತೋರದಿರುವುದು ಮರಣೋತ್ತರ ಪರೀಕ್ಷೆಯ ಕೆಲಸ ಜ್ವಲಂತ ಸಮಸ್ಯೆಯಾಗಿ ಉಳಿದಿದೆ.
ತಾಲ್ಲೂಕಿನ ಯಾವ ಮೂಲೆಯಲ್ಲಿ ಯಾವುದೇ ಅವಘಢ ಸಂಭವಿಸಿದರೂ ಶವಗಳನ್ನು ತಾಲ್ಲೂಕು ಆಸ್ಪತ್ರೆಗೆ ತರುವುದು ಈ ಹಿಂದಿನಿಂದಲೂ ಬೆಳೆದುಬಂದಿರುವ ಸಂಪ್ರದಾಯ, ಜನಸಂಖ್ಯೆಗೆ ತಕ್ಕಂತೆ ಅಗತ್ಯ ಸೌಕರ್ಯಗಳು ಇರುವ 4-5 ಬೆಡ್ ಗಳು ಇರುವ ಶವಾಗಾರದ ಕೊರತೆ ತಾಲ್ಲೂಕಿಗೆ ಬೇಕಾಗಿದೆ.
ಆದರೆ ತಾಲ್ಲೂಕಿನ ಕಿಕ್ಕೇರಿ, ಅಕ್ಕಿಹೆಬ್ಬಾಳು, ಬೂಕನಕೆರೆ, ಸಂತೇಬಾಚಹಳ್ಳಿ ಮುಂತಾದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶವಪರೀಕ್ಷೆಯನ್ನು ನಡೆಸುವ ಸೌಲಭ್ಯಗಳನ್ನು ಅಳವಡಿಸದಿರುವುದು ದುರದೃಷ್ಟಕರ ಸಂಗತಿ, ಸಚಿವರು ಈ ಬಗ್ಗೆ ಗಮನಹರಿಸಿ ಸುಸಜ್ಜಿತ ಶವಾಗಾರ, ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು. ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿತ್ರಶೀರ್ಷಿಕೆ;13 ಕೆ.ಆರ್.ಪಿ 01 ;-. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಚಿತ್ರ..