ಅತ್ಯಾಚಾರ ಹಿಂದೂ ಮಂದಿರಗಳ ಧ್ವಂಸ ತಡೆಯಬೇಕೆಂದು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ:ನ.9: ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಂದರ್ಭ ಪ್ರಾರಂಭವಾದ ಹಿಂದೂಗಳ ಮೇಲಿನ ಹಲ್ಲೆ, ಹತ್ತು ಹಿಂದೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಿಂದೂ ಮಂದಿರಗಳ ಧ್ವಂಸ ಇವೆಲ್ಲವನ್ನು ತಕ್ಷಣ ತಡೆಯಬೇಕೆಂದು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಯುವ ವಕೀಲರ ಸಂಘ ಕಲಬುರಗಿ, ಜಾಗೃತ ನ್ಯಾಯವಾದಿಗಳು, ನ್ಯಾಯ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸಂಘಟಿತರಾಗಿ ಪ್ರತಿಭಟನಾ ಪ್ರದರ್ಶನವನ್ನು ಪ್ರದರ್ಶಿಸಿ ಗ್ರಹಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಕಲ್ಯಾಣ ಕರ್ನಾಟಕ ಯುವ ವಕೀಲರ ಸಂಘ ಅಧ್ಯಕ್ಷ ಜಯಾನಂದಯ್ಯಾ ಸ್ವಾಮಿ. ಹೈಕೋರ್ಟ ವಕೀಲರು ತಿಳಿಸಿದ್ದಾರೆ.
ನವರಾತ್ರಿಯ ದುರ್ಗಾಪೂಜೆಯಿಂದ ಪ್ರಾರಂಭವಾಗಿ ಇಲ್ಲಿಯತನಕ ಪ್ರತಿದಿನವೂ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ, ಪ್ರಾಣಹಾನಿ, ಮಂದಿರಗಳ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದಾಳಿ ತಮ್ಮ ಗಮನಕ್ಕೆ ಬಂದಿದೆ ಎಂದು ಕೊಳ್ಳುತ್ತೇವೆ. ಬಾಂಗ್ಲಾದಲ್ಲಿಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ ಎನ್ನುವುದು ಮಾಧ್ಯಮಗಳಲ್ಲಿವರದಿಯಾಗಿದೆ. ನವರಾತ್ರಿಯ ಸಂದರ್ಭದಲ್ಲಿದು ರ್ಗಾಪೂಜೆಯ ಪೆಂಡಾಲುಗಳ ಮೇಲೆ ಜಿಹಾದಿದಾಳಿ. ದುರ್ಗೆಯ ಮೂರ್ತಿಗಳ ಧ್ವಂಸ ಹಾಗೂ ಪೆಂಡಾಲುಗಳ ನಾಶದೊಂದಿಗೆ ಪ್ರಾರಂಭವಾದ ಹಿಂದೂಗಳ ಹಾಹಾಕಾರ ಇನ್ನೂನಿಂತಿಲ್ಲ. ಕುರಾನ್ಗೆ ಯಾರೋ ಅಪಮಾನ ಮಾಡಿದ್ದಾರೆ ಎಂಬ ಗಾಳಿಸುದ್ದಿ ಹಿಂದೂ ಮಂದಿರಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂಗಳ ಮನೆಗಳನ್ನು ಸುಡಲಾಗುತ್ತದೆ ಎಂದರೆ ಇದರ ಹಿಂದೆ ಕುತ್ಸಿತ ಸಂಚು ಇರುವುದು ಕಾಣುತ್ತದೆ. ಖುಲ್ನಾದಲ್ಲಿನ ಹಿಂದೂ ದೇವಸ್ಥಾನದ ಹತ್ತಿರದಲ್ಲಿ 18 ಜೀವಂತ ಬಾಂಬುಗಳು ಸಿಕ್ಕಿರುವುದು ಹಿಂದೂಗಳ ವಿರುದ್ಧದ ಸಂಚಿಗೆ ಪುಷ್ಟಿನೀಡುತ್ತದೆ ನೋವಾಖಲಿಯಲ್ಲಿನ ಹಿಂದೂಗಳ ಹತ್ಯೆ, ಅಲ್ಲಿನ ಇಸ್ಕಾನ್ಮೇಲೆ ನಡೆದಿರುವ ದಾಳಿ ಹತ್ತು ವರ್ಷದ ಬಾಲಕಿಯನ್ನು ಬಿಡದೆ ಹಿಂದೂ ಹೆಣ್ಣುಮಕ್ಕಳ ಮೇಲೆ ನಡೆದಿರುವ ಅತ್ಯಾಚಾರಗಳು ಬಾಂಗ್ಲಾದಲ್ಲಿ ಹಿಂದುಗಳ ಬದುಕನ್ನು ಅಸಹನೀಯಗೊಳಿಸಿದೆ ಎಂದರು.
ಬಾಂಗ್ಲಾದೇಶದಲ್ಲಿಕೇವಲ 8% ಇರುವ ಹಿಂದೂಗಳು ಭಯದಿಂದ ತತ್ತರಿಸುತ್ತಿದ್ದು ಅವರಿಗೆ ಕಾಣುತ್ತಿರುವ ಏಕೈಕ ಆಶಾ ಕಿರಣ ಭಾರತ. ಪ್ರಪಂಚದ ಯಾವುದೇ ದೇಶದಲ್ಲಿರುವ ಹಿಂದೂತನಗೆ ಸಮಸ್ಯೆ ಯಾದಾಗ ಭಾರತ ಮಾತನಾಡಲಿ ಎಂದು ಬಯಸುತ್ತಾನೆ. ಯಾಕೆಂದರೆ ಭಾರತ ಹಿಂದುಗಳ ತಾಯಿನೆಲ. ಮಾಧ್ಯಮಗಳ ವರದಿ ಪ್ರಕಾರ ಕೆಲವೇ ಹಿಂದುಗಳ ಹತ್ಯೆ ಎಂದಿದ್ದರು ವಾಸ್ತವವಾಗಿ ಅಲ್ಲಿ ಹಿಂದೂಗಳ ಮಾರಣ ಹೋಮವೇ ನಡೆದಿರುವ ಸಾಧ್ಯತೆ ಬಹಳ ಹೆಚ್ಚಾಗಿದೆ ಹಾಗಾಗಿ ಭಾರತ ಸರ್ಕಾರ ಬಾಂಗ್ಲಾ ದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಎಲ್ಲಾ ಹಿಂಸೆ ಅತ್ಯಾಚಾರಗಳನ್ನು ನಿಲ್ಲಿಸಲು ಕಠಿಣಕ್ರಮ ಕೈಗೊಳ್ಳಲು ಅಲ್ಲಿನ ಸರ್ಕಾರದ ಮೇಲೆ ಒತ್ತಡತರಬೇಕು. ಬಾಂಗ್ಲಾ ದೇಶಕ್ಕೆ ಒಂದು ನಿಯೋಗವನ್ನು ಕಳಿಸಿ ಅಲ್ಲಿನ ಹಿಂದೂಗಳ ಪರಿಸ್ಥಿತಿಯ ಬಗ್ಗೆಅಧ್ಯಯನ ನಡೆಸಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು. ಅಲ್ಪಸಂಖ್ಯಾತನಾಗಿರುವ ಹಿಂದೂವಿನ ರಕ್ಷಣೆಗಾಗಿ ಹೊಸ ಕಾನೂನು ತರಲು ಬಾಂಗ್ಲಾ ಸರಕಾರಕ್ಕೆ ಒತ್ತಾಯಿಸಬೇಕು. ಅಲ್ಲಿನ ಹಿಂದುಗಳಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಲು ಭಾರತ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಯುವ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಬಸವರಾಜ ಕೋಡಗಿ ಮಠ, ಸಹ ಕಾರ್ಯದರ್ಶಿ ದೇವರಾಜ ಹಮೀಲಪೂರಕರ ಸೇರಿದಂತೆ ಇನ್ನಿತರರು ಇದ್ದರು