ಅತ್ಯಾಚಾರ, ಹತ್ಯೆ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ

ಅಥಣಿ :ಮಾ.31: ಇತ್ತೀಚಿಗೆ ಬೆಂಗಳೂರಿನಲ್ಲಿ ಜಂಗಮ ಸಮಾಜದ ಯುವತಿಯನ್ನು ಅತ್ಯಾಚಾರ ವೆಸಗಿ ಅಮಾನುಷವಾಗಿ ಹತ್ಯೆ ಮಾಡಿರುವದನ್ನು ಖಂಡಿಸಿ ಅಥಣಿ ನಗರದಲ್ಲಿ ತಾಲೂಕಾ ಜಂಗಮ ಅಭಿವೃದ್ದಿ ಸಂಘದ ವತಿಯಿಂದ ತಹಶೀಲ್ದಾರ ಬಿ.ಎಸ್.ಖಡಕಭಾವಿ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿಜಯ ಹಿರೇಮಠ ಮತ್ತು ಸೋಮಶೇಖರ ಅಂಬಲಿಮಠ ಅವರು ಜಂಟಿಯಾಗಿ ಮಾತನಾಡಿ ಈ ಅಮಾನುಷ ಕೃತ್ಯವನ್ನು ಜಂಗಮ ಸಮಾಜದ ವತಿಯಿಂದ ಉಗ್ರವಾಗಿ ಖಂಡಿಸಿತ್ತೇವೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸವಂತೆ ಆಗಬೇಕು ಎಂದು ಮನವಿ ಮೂಲಕ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ ಮತ್ತು ಸರಕಾರದಿಂದ ಅವರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ ಸರಕಾರ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ. ಆರೋಪಿಗಳನ್ನು ತಕ್ಷಣ ಬಂಂಧಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಜಂಗಮ ಸಮಾಜದ ತಾಲೂಕಾ ಅಧ್ಯಕ್ಷರಾದ ಈರಣ್ಣಾ ಜಗದಾಳಮಠ ಕಾರ್ಯದರ್ಶಿ ಜಗದೀಶ ಹಿರೇಮಠ ಸಂಜು ತೆಲಸಂಗಮಠ, ಶಂಕರ ಅಳ್ಳಿಮಟಿ. ಆನಂದ ಎಕ್ಕಿಹಳ್ಳಿಮಠ, ಮಹಾಂತೇಶ ಸಾಲಿಮಠ, ವಿನಯ ಅಳ್ಳಿಮಟಿ. ಸೋಮಶೇಖರ ಅಂಬಲಿಮಠ, ವಿಜಯ ಹಿರೇಮಠ, ಸಿ.ಎ.ಇಟ್ನಾಳಮಠ, ಉಪಸ್ಥಿತರಿದ್ದರು.