ಅತ್ಯಾಚಾರ ವೆಸಗಿದ ಆರೊಪಿ ಬಂಧನ

ಹರಪನಹಳ್ಳಿ.ಜೂ.೭; ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ವೆಸಗಿದ ಯುವಕನೊಬ್ಬನನ್ನು ಚನ್ನಪಟ್ಟಣದಲ್ಲಿ ಇಲ್ಲಿಯ ಪೋಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ತಾಲೂಕಿನ ಮತ್ತಿಹಳ್ಳಿ ಗ್ರಾಮದ ಪ್ರವೀಣ ಅಲಿಯಾಸ್ ಕೊಟ್ರೇಶ(24) ಬಂಧಿತ ಆರೋಪಿ. ಈ ಆರೋಪಿ ತಮದೇ ಗ್ರಾಮದ 15 ವರ್ಷದ ಬಾಲಕಿಯನ್ನು ಕಳೆದ ಎಪ್ರಿಲ್ 16 ರಂದು ಅಪಹರಿಸಿಕೊಂಡು ಹೋಗಿದ್ದನು. ಸಂತ್ರಸ್ಥೆ ಬಾಲಕಿಯ ತಂದೆ ನೀಡಿದ ದೂರನ್ನು ಚಿಗಟೇರಿ ಪೋಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.  ಡಿವೈಎಸ್ಪಿ ವಿ.ಎಸ್ .ಹಾಲಮೂರ್ತಿರಾವ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಾಗರಾಜ ಎಂ.ಕಮ್ಮಾರ ನೇತೃತ್ವದಲ್ಲಿ ಪಿಎಸ್ ಐ ನಾಗರಾಜ, ಮುಖ್ಯ ಪೇದೆ ಮೋಹನ ಪಾಟೀಲ್ , ಕುಮಾರ ಇತರ ಸಿಬ್ಬಂದಿ ಗಳು ಕಾರ್ಯಚರಣೆ ನಡೆಸಿ ಚೆನ್ನಪಟ್ಟಣದಲ್ಲಿದ್ದ ಆರೋಪಿ ಹಾಗೂ ಬಾಲಕಿ ಇಬ್ಬರನ್ನು ಪತ್ತೆ ಹಚ್ಚಿ ಕರೆದು ಕೊಂಡು ಬಂದು ವಿಚಾರಣೆ ಮಾಡಿದ್ದಾರೆ.ವಿಚಾರಣೆ ಸಂದರ್ಭದಲ್ಲಿ ಬಾಲಕಿಗೆ ಆರೋಪಿ ನಿರಂತರವಾಗಿ ಬಲತ್ಕಾರ ಮಾಡುತ್ತಾ ಬಂದಿರುವುದು ತಿಳಿದು ಬಂದಿದೆ ಎಂದು ಪೋಲೀಸರು ತಿಳಿಸಿದ್ದಾರೆ.ನೊಂದ ಬಾಲಕಿಯನ್ನು ಅವರ ಪೋಷಕರ ವಶಕ್ಕೆ ಒಪ್ಪಿಸಿ ಆರೋಪಿ ಪ್ರವೀಣ ಅಲಿಯಾಸ್ ಕೊಟ್ರೇಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.