ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಮಹಿಳೆಯರಿಂದ ಮೇಣದಬತ್ತಿಯೊಂದಿಗೆ ಪ್ರತಿಭಟನೆ

ಕಲಬುರಗಿ.ಸೆ.15:ಅತ್ಯಾಚಾರ ಹಾಗೂ ಭೀಕರ ಕೊಲೆಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿರುವುದು ಅತ್ಯಂತ ಆಘಾತಕಾರಿಯಾದ ಬೆಳವಣಿಗೆಯಾಗಿದೆ. ಅದೇ ಸಂದರ್ಭದಲ್ಲಿ ಅಪರಾಧಿಗಳಿಗೆ ನಿದರ್ಶನೀಯವಾದ ಶಿಕ್ಷೆಯಾಗದೇ ಇರುವುದು ಒಂದೆಡೆ ಅಕ್ಷಮ್ಯವಾದರೆ ಇನ್ನೊಂದೆಡೆ ಆಳುವ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತಿವೆ ಆರೋಪಿಸಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಮ್‍ಎಸ್‍ಎಸ್) ಕಾರ್ಯಕರ್ತೆಯರು ಅಪರಾಧಿಗಳ ಶಿಕ್ಷೆಗಾಗಿ ಎಲ್ಲೆಡೆಯೂ ಕ್ಯಾಂಡಲ್ ಲೈಟ್ (ಮೇಣದಬತ್ತಿಯೊಂದಿಗೆ) ಪ್ರತಿಭಟನೆ ಮಾಡಿದರು.
ಉತ್ತರ ಪ್ರದೇಶದ ಹತ್ರಾಸ್ ಘಟನೆಯ ಕಹಿ ನೆನಪುಗಳು ಇನ್ನೂ ಮಾಸಿರದ ದಿನಗಳಲ್ಲಿ ನೈರುತ್ಯ ದೆಹಲಿಯ ಹಳೆಯ ನಂಗಲ್ ಗ್ರಾಮದಲ್ಲಿ, ದೆಹಲಿಯಲ್ಲಿ ಪೋಲೀಸ್ ಅಧಿಕಾರಿ ರಾಬಿಯಾ, ಮುಂಬೈನಲ್ಲಿ ಒಬ್ಬ ಮಹಿಳೆಯ ಮೇಲೆ, ಆಂಧ್ರದಲ್ಲಿ 6 ವರ್ಷದ ಮಗುವಿನ ಮೇಲೆ, ಮೈಸೂರಿನಲ್ಲಿ ವಿದ್ಯಾರ್ಥಿನಿ ಹೀಗೆ ಹಲವು ಘಟನೆಗಳು ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ ಎಂದು ಪ್ರತಿಭಟನೆಕಾರರು ಕಳವಳ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಹೆಣ್ಣುಮಗಳನ್ನು ಭೋಗದ ವಸ್ತುವಾಗಿ ನೋಡುವ ಹಳೆಯ ಪುರುಷ ಪ್ರಧಾನ ಮೌಲ್ಯಗಳು ಮಾತ್ರ ಇನ್ನೂ ಜೀವಂತವಾಗಿವೆ. ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ದೌರ್ಜನ್ಯದಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಕಾರಣ ಅತ್ಯಾಚಾರಿಗಳು ನಿರ್ಭಯದಿಂದ ಓಡಾಡಲು ಅವಕಾಶ ಮಾಡಿಕೊಡುವ ಪೆÇಲೀಸ್ ಹಾಗೂ ಆಡಳಿತ ವ್ಯವಸ್ಥೆಯ ಅಸ್ಸೀಮ ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ನಿಷ್ಕ್ರಿಯತೆ. ಹೀಗಾಗಿ ಹೆಣ್ಣುಮಕ್ಕಳಿಗೆ ಎಲ್ಲಿಯೂ ಕೂಡ ರಕ್ಷಣೆ ಸಿಗದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೃತ್ಯಗಳ ವಿರುದ್ಧ ನಗರದ ಬುದ್ಧ ನಗರ, ಕೀರ್ತಿನಗರ ಹೀಗೆ ಹಲವಾರು ಕಡೆಗಳಲ್ಲಿ ಕ್ಯಾಂಡೆಲ್ ಲೈಟ್ ಪ್ರತಿಭಟನೆಯನ್ನು ಮಾಡಿದರು. ನೂರಾರು ಜನ ಮಹಿಳೆಯರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು ಮತ್ತು ಅಶ್ಲೀಲ ಸಿನಿಮಾ ಸಾಹಿತ್ಯವನ್ನು ನಿμÉೀಧಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.