ಅತ್ಯಾಚಾರ ಕೊಲೆ: ಆರೋಪಿ ಗಲ್ಲು ಶಿಕ್ಷೆಗೆ ಆಗ್ರಹ

ರಾಯಚೂರು,ಮಾ.೩೧- ಬೇಡ ಜಂಗಮ ಸಮುದಾಯದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿ ಕೊಂದಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಬೇಡ ಜಂಗಮ ಜಿಲ್ಲಾ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಿವಾನಂದ ಮಗಳಾದ ಕುಮಾರಿ ಪಲ್ಲವಿ ಎಂಬ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೃತ್ಯವನ್ನು ಖಂಡಿನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮನಗರ ಉಪವಿಭಾಗ ಕಗ್ಗಲಿಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಗಿದ್ದು ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೇ ನಿಷ್ಪಕ್ಷವಾದ ತನಿಖೆ ನಡೆಸಿ ಆರೋಪಿಗಳನ್ನು ಜಾಮಿನುಗಳ ಮೇಲೆ ಬಿಡುಗಡೆ ಮಾಡದಿರುಲು ಮತ್ತು ಅವರಿಗೆ ಉಪ್ಪ ಶಿಕ್ಷೆ ಶೀಘ್ರವೇ ಜಾರಿಯಾಗುವಂತೆ ಸರ್ಕಾರ ನೋಡಿಕೊಳ್ಳುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಿ. ಇಂತಹ ರಾಕ್ಷಸಿ ಕೃತ್ಯಗಳಿಗೆ ಅಂತ್ಯ ಹಾಡಬೇಕು. ಮತ್ತು ಆ ಕುಟುಂಬಕ್ಕೆ ಸರ್ಕಾರ ಕೂಡಲೇ ೫೦ ಸಾವಿರ ಲಕ್ಷ ರೂ ಪರಿಹಾರವನ್ನು ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೀರಯ್ಯಸ್ವಾಮಿ ಆಶಾಪೂರ, ಶಂಕ್ರಯ್ಯ ಸ್ವಾಮಿ, ಶರಣಬಸವ ಹಿರೇಮಠ ಸೇರಿದಂತೆ ಉಪಸ್ಥಿತರಿದ್ದರು.