ಅತ್ಯಾಚಾರ ಆರೋಪ ಬ್ರಿಟನ್ ಸಂಸದ ಬಂಧನ

ಲಂಡನ್,ಆ.೨-ಬ್ರಿಟನ್ನಿನ ಆಡಳಿತ ರೂಢ ಕನ್ಸರ್‌ವೇಟಿವ್ ಪಕ್ಷದ ಸಂಸದರೊಬ್ಬರನ್ನು ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂಸದರು ತನ್ನ ಮೇಲೆ ಅತ್ಯಾಚಾರ, ಲೈಂಗಿಕ ಹಲ್ಲೆ, ಬೆದರಿಕೆ ಒಡ್ಡಿದ್ದರು ಎಂದು ಆತನ ಸಂಸದೀಯ ಸಹಾಯಕಿ ಆರೋಪ ಮಾಡಿದ್ದರು. ಈ ಆಧಾರದ ಮೇಲೆ ಸಂಸದನನ್ನು ಬಂಧಿಸಲಾಗಿದೆ. ಪ್ರಸ್ತುತ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ ಎಂದು ಮೆಟ್ರೊಪೊಲಿಟಿನ್ ಪೊಲೀಸರು ತಿಳಿಸಿದ್ದಾರೆ.
ಮಾಜಿ ಸಚಿವರು ಆಗಿರುವ ಈ ಸಂಸದನ ಹೆಸರನ್ನು ಬಹಿರಂಗ ಪಡಿಸಿಲ್ಲ. ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಲೈಂಗಿಕ ಹಲ್ಲೆಯ ನಾಲಕ್ಕು ಘಟನೆಗಳು ನಡೆದಿವೆ ಎಂದು ದೂರುಗಳು ಜು.೩೧ ರಂದು ದಾಖಲಾದವು. ಅತ್ಯಾಚಾರ ಕೃತ್ಯ ಎಸಗಿರುವ ಸೆಂಖ್ಯೆಯ ಮೇಲೆ ೫೦ ವಯಸ್ಸಿನ ವ್ಯಕ್ತಿಯನ್ನು ನಿನ್ನೆ ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬ್ರಿಟನ್ ದೇಶದ ಮಾಧ್ಯಮಗಳಲ್ಲಿ ನಿನ್ನೆ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಆಡಳಿತರೂಢ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕಂಜರವೇಟಿವ್ ಪಕ್ಷದ ವಕ್ತಾರರು, ಈ ಆರೋಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಸ್ತುತ ಈ ಪ್ರಕರಣವನ್ನು ಪೊಲೀಸರು ನಿಭಾಯಿಸುತ್ತಿರುವುದರಿಂದ ಏನನ್ನಾದರೂ ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.