ಅತ್ಯಾಚಾರ ಆರೋಪಿಗೆ 7 ವರ್ಷ ಜೈಲು

ಕೋಲಾರ,ಆ,೧೮- ಶ್ರೀನಿವಾಸಪುರ ತಾಲ್ಲೂಕು,ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯ, ಗುರುವುಳೊಳ್ಳಗಡ್ಡೆ ಗ್ರಾಮದ ವಾಸಿ ಪಾಂಡು ಅಲಿಯಾಸ್ ರವೀಂದ್ರ ಬಿನ್ ರವಣಪ್ಪ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅವರ ಜಮೀನಿನ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪವು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿ ರವೀಂದ್ರಗೆ ೭ವರ್ಷ ಸಜೆ ತೀರ್ಪು ನೀಡಿದ್ದಾರೆ.
ಸದರಿ ಆರೋಪಿ ವಿರುದ್ದ ರಾಯಲ್ಪಾಡು ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಸಿ. ಆರ್. ನಂ. ೧೭/೨೦೨೨ ರಂತೆ ಕಲಂ ೩೭೬ (೨) (೧) ಐ.ಪಿ.ಸಿ. ೬ & ೧೦ ರ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸ್ಪೇಷಲ್ ಸಿ. (ಪೋಕ್ಸೋ) ೯೩/೨೦೨೨ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ರವೀಂದ್ರಗೆ ಕಲಂ ೧೦ ಪೋಕ್ಸೋ ಕಾಯ್ದೆ ಅಡಿಯಲ್ಲಿ ೭ವಷ ಸಜೆ ಜೊತೆಗೆ ರೂ.೫೦ ಸಾವಿರರೂ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ ೬ ತಿಂಗಳು ಸಜೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ರೂ. ೫ ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ.ಲಲಿತಕುಮಾರಿರವರು ವಾದ ಮಂಡಿಸಿದ್ದರು.