ಅತ್ಯಾಚಾರ ಆರೋಪಿಗೆ 2ವರ್ಷ ಕಠಿಣ ಶಿಕ್ಷ್ಷೆ

ಚಾಮರಾಜನಗರ, ಮಾ.31- ಅಪ್ರಾಪ್ತ 7 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರಎಸಗಿದ್ದಆರೋಪಿಗೆಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವು 2 ವರ್ಷಕಠಿಣ ಶಿಕ್ಷೆ ವಿಧಿಸಿದೆ.
ಕೊಳ್ಳೆಗಾಲ ತಾಲ್ಲೋಕು, ದೊಂಡಿದ್ದುವಾಡಿಗ್ರಾಮದಸತೀಶ್‍ಕ್ವಾಟ್ಲ ಸತೀಶ, ಬಿನ್ ನೀಲಸಿದ್ದಶೆಟ್ಟಿಎಂಬಾತನೇಅತ್ಯಾಚಾರಆರೋಪಿ.ಆರೋಪಿಯುದಿನಾಂಕ25.07.2021 ರಂದುಅದೇಗ್ರಾಮದ 7 ವರ್ಷದಅಪ್ರಾಪ್ತ ಬಾಲಕಿ ರಾತ್ರಿ 8.30 ಗಂಟೆ ಸಮಯದಲ್ಲಿಅಂಗಡಿಗೆ ಹೋಗಿ ಮಾತ್ರತೆಗೆದುಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗಆರೋಪಿಯು ಬಾಲಕಿಯನ್ನು ನಿಮ್ಮ ಮನೆಗೆ ತಾನೇಕರೆದುಕೊಂಡು ಹೋಗುವುದಾಗಿ ಹೇಳಿ ಹಿತ್ತಲಿನ ಸಮೀಪವಿದ್ದದನದಕೊಟ್ಟಿಗೆ ಹಿಂಭಾಗದ ಸೋಣಿಗೆಕರೆದುಕೊಂಡು ಹೋಗಿ ಆಕೆಯಮೇಲೆ ಅತ್ಯಚಾರ ಮಾಡಿರುತ್ತಾನೆ. ಈ ಸಮಯದಲ್ಲಿ ಬಾಲಕಿಯುಕಿರುಚಿಕೊಂಡಾಗ ನೀನು ಕೂಗಾಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಸಿರುತ್ತಾನೆ.
ನಂತರ ಬಾಲಕಿಯಕುಟುಂಬದವರು ನೀಡಿದದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೋಲಿಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸತೀಶನನ್ನು ಬಂಧಿಸಿ, ನ್ಯಾಯಾಲಯದ ವಶಕ್ಕೆ ಒಪ್ಪಿಸಿದಾಗ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿಮೇಲ್ಕಂಡಆರೋಪಿ ಸತೀಶನಿಗೆಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವು ಪೋಕ್ಸೋಕಾಯ್ದೆಯಡಿಭಾರತೀಯದಂಡ ಸಂಹಿತೆ ಕಲಂ 363ಗೆ 2 ವರ್ಷ ಶಿಕ್ಷೆ, 5 ಸಾವಿರದಂಡ, ತೆರೆಲುತಪ್ಪಿದಲ್ಲಿ, 6 ತಿಂಗಳ ಸಜೆ, ಹಾಗೂ ಕಲಂ, 506ಕ್ಕೆ 2 ವರ್ಷ ಸಾದಾ ಶಿಕ್ಷೆ 5 ಸಾವಿರದಂಡ, ತೆರೆಲುತಪ್ಪಿದಲ್ಲಿ, 6 ತಿಂಗಳ ಸಜೆ ಹಾಗೂ 376(ಎಬಿ)ಗೆ 20 ವರ್ಷಕಠಿಣ ಶಿಕ್ಷೆ, 5 ಸಾವಿರರೂದಂಡ, ದಂಡತೆರಲುತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ, ಹಾಗೂ ಪೆÇಕ್ಕೊ ಕಾಯ್ದೆ ಕಲಂ. 4ಕ್ಕೆ 20 ವರ್ಷಕಠಿಣ ಶಿಕ್ಷೆ, 5 ಸಾವಿರರೂದಂಡ, ದಂಡತೆರಲುತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ, ಕಲಂ, 6ಕ್ಕೆ 20 ವರ್ಷ ಶಿಕ್ಷೆ, 5 ಸಾವಿರರೂದಂಡ, ದಂಡತೆರಲುತಪ್ಪಿದಲ್ಲಿ 6 ತಿಂಗಳ ಸಾದಾ ಸಜೆಯನ್ನುಆರೋಪಿಯುಏಕಕಾಲದಲ್ಲಿಅನುಭವಿಸತಕ್ಕದ್ದುಎಂದು ಆದೇಶಿಸಿದ್ದು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 2 ಲಕ್ಷರೂಪಾಯಿ ಹಣವನ್ನು 30 ದಿನದ ಒಳಗೆ ನೊಂದ ಬಾಲಕಿಗೆ ಪರಿಹಾರದರೂಪದಲ್ಲಿ ನೀಡಬೇಕೆಂದು ಆದೇಶಿಸಿ ಮಾನ್ಯ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತದೆ.
ಕೆ.ಯೋಗೇಶ್‍ರವರು ಸರ್ಕಾರದ ಪರವಾಗಿಆರೋಪಿತರ ವಿರುದ್ಧ ವಿಚಾರಣೆ ನಡೆಸಿ ವಾದವನ್ನುಮಂಡಿಸಿರುತ್ತಾರೆ,