ಕೋಲಾರ,ಸೆ,೨೬-ತಾಲ್ಲೂಕಿನ ಕಸಬಾ ಹೋಬಳಿ ಗದ್ದೆಕಣ್ಣೂರು ಗ್ರಾಮದ ವಾಸಿ ನವೀನ್ ಕುಮಾರ್ @ ನವೀನ್ ಬಿನ್ ಶ್ರೀನಿವಾಸ್ (ಹಾಲಿ ವಾಸ ಕಮ್ಮಸಂದ್ರ) ಎಂಬಾತ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅತ್ಯಾಚಾರ ಮಾಡಿದ ಆರೋಪವು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ ೧೦ವರ್ಷ ಸಜೆ ತೀರ್ಪು ನೀಡಿದ್ದಾರೆ.
ಸದರಿ ಆರೋಪಿಯ ವಿರುದ್ದ ಕ್ಯಾಸಂಬಳ್ಳಿ ಪೊಲೀಸ್ ಠಾಣೆ, ಬೇತಮಂಗಲ ವೃತ್ತ ನಿರೀಕ್ಷಕರಾದ ಜೆ.ಸುರೇಶ್ ರಾಜು ರವರು ಸಿ.ಆರ್.ನಂ ೩೭/೨೦೨೩ ರಂತೆ ಕಲಂ ೩೭೬ ಐಪಿಸಿ/ಜೊ ಕಲಂ ೪ ಮತ್ತು ೬ರ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸ್ಪೇಷಲ್ ಸಿ.(ಪೋಕ್ಸೋ) ೧೬/೨೦೨೩ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ನವೀನ್ ಕುಮಾರ್ @ ನವೀನ್‌ಗೆ ಕಲಂ ೪/೧ ಪೋಕ್ಸೋ ಕಾಯ್ದೆ ಅಡಿಯಲ್ಲಿ ೧೦ ವರ್ಷ ಸಜೆ ಜೊತೆಗೆ ರೂ. ೫೦ ಸಾವಿರ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ ೬ ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ರೂ. ೪ ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ.ಲಲಿತಕುಮಾರಿ ರವರು ವಾದ ಮಂಡಿಸಿದ್ದರು.