ಜೇವರ್ಗಿ :ಜು.19: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಕಿಡಿಗೇಳಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಶೂಟ್ ಮಾಡಿ ಆ ಬಾಲಕಿಯ ಆತ್ಮಕ್ಕೆ ಶಾಂತಿ ಕೊಡಿಸಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಶರಣು ತಳಕೇರಿ ಆಗ್ರಹಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ತಾಲೂಕ ದಂಢಾಧೀಕಾರಿಗ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು. ಕಲ್ಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ದೇವಂತಿಗಿ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಿಗಿ ಕೊಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅವನನ್ನು ಸಾರ್ವಜನಿಕ ಸ್ಥಳದಲ್ಲಿ ತಂದು ಶೂಟ್ ಮಾಡಬೇಕು. ನಾಗರಿಕ ಸಮಾಜ ತಲೆ ತಗ್ಗಿಸುವಂತ ನಾಚಿಕೆ ಕೆಡಿನ ಸಂಗತಿ. ಇಂತಹ ಕೀಡಿಗೇಡಿಗಳನ್ನ ಸಾರ್ವಜನಿಕ ಸ್ಥಳದಲ್ಲಿ ಶೂಟೌಟ್ ಮಾಡುವುಧರ ಮುಲಕ ಇಂತಹ ಕಾರ್ಯಕ್ಕೆ ಯಾರಾಧರು ಮುಂದಾದರೆ ಅವರಿಗೆ ಇದೆ ಶಿಕ್ಷೇ ಎಂಬ ಸಂದೇಶ ನೀಡಿದಾಗ ಮಾತ್ರ ಅತ್ಯಾಚರದ ಅಪರಾದ ಕಡಿಮೇಯಾಗುತ್ತವೆ. ಇಂಥಹ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇವೆ ಅದಕ್ಕಾಗಿ ಕೂಡಲೇ ಸರಕಾರ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು.
ಎರಡು ವರ್ಷದ ಹಿಂದೆ ಕುರಿ ಕಾಯುವ ಬಾಲಕಿಯ ಮೇಲೆ ಅತ್ಯಾಚಾರ ಎಸಿಗಿ ಕೊಲೆ ಮಾಡಿದರು ಅದೇ ರೀತಿ ಈ ಪ್ರಕರಣ ಕೂಡ ಆಗಿದೆ. ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂಥಹ ಪ್ರಕಣ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕ ದಂಡಾಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಅವರಿಗೆ ಮನವಿ ಪತ್ರದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಣು ಅಂಕಲಗಾ, ದೇವರಾಜ್ ಯಾಳವಾರ, ದೇವು ಆಂದೋಲ, ಸಂತೋಷ್ ಬಿಂದಗಿ, ಸಂಘಟನೆ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.