ಅತ್ಯಾಚಾರಿಗಳ ಕಡಿವಾಣಕ್ಕೆ ಎನ್‍ಕೌಂಟರೊಂದೆ ಪರಿಹಾರ: ಶೇಷರಾವ ಮಾನೆ

ವಿಜಯಪುರ, ಜೂ.1-ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ಭಯಂಕರ ಅತ್ಯಾಚಾರ ಕೊಲೆ ಪ್ರಕರಣಗಳು ದೇಶದ ಮೂಲೆ ಮೂಲೆಗಳಲ್ಲಿ ಆತಂಕ ಸೃಷ್ಠಿಸುತ್ತಿರುವ ಘಟನೆಗಳನ್ನು ಕರವೇ ನಮ್ಮ ಬಣದ ಕಾರ್ಯಕರ್ತರು ಸುಹಾಗ ಕಾಲನಿ ಹೇಯ ಕೃತ್ಯಗಳನ್ನು ಖಂಡಿಸಿ ಪ್ರತಿಭಠಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಆಸ್ಸಾಂನಲ್ಲಿ ಐವರು ಪುಂಡರು ಬಾಲಕಿಯನ್ನು ಹಾಡು ಹಗಲೆ ಥಳಿಸಿ ಚಿತ್ರಹಿಂಸೆ ನೀಡಿದ ಘಟನೆ ವಿಡಿಯೋ ವೈರಲ್ ಆಗಿದ್ದು ಈಶಾನ್ಯ ರಾಜ್ಯದ ಬಾಲಕಿಯ ಮೇಲೆ ಐವರು ಕ್ರೂರವಾಗಿ ದಾಲೀ ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಎನ್‍ಕೌಂಟರ್ ಮೂಲಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಗೊಸ್ಕರ ಹಿಂಸಾಚಾರದಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಎಂದು ಕೇಂದ್ರ ಗೃಹ ಸಚಿವಾಲಯ ಸತ್ಯ ಶೋಧನಾ ಸಮಿತಿಗೆ ನಾಲ್ವರ ಸದಸ್ಯರ ಸಮಿತಿ ಶನಿವಾರ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ಬಾಂಗ್ಲಾ ಯುವತಿಯನ್ನು ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಚಾರ ಕ್ಕೊಳಗಾದ ಯುವತಿಯನ್ನು ಕೇಳದ ಕಲ್ಲಿಕೋಟೆಯಿಂದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಪ್ರಕರಣ ತನಿಖೆ ನಡೆಸುತ್ತಿರುವ ಪೂರ್ವ ವಿಭಾಗದ ಪೋಲಿಸರು ಸೆಕ್ಸನ್ 164ರನ್ವಯ ಹೇಳಿಕೆ ದಾಖಲಿಸಲು ಯುವತಿಯನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಸೋಮವಾರ ಹಾಜಪಡಿಸಲಾಗುತ್ತಿದೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಪ್ರಕರಣ ಹಾಗೂ ಇಂಡಿ ತಾಲೂಕಿನ ಸಾವಳಸಂಗ 2015 ರಲ್ಲಿ 11 ವರ್ಷ ದಲಿತ ಬಾಲಕಿ ಮೇಲೆ ಪ್ರಕರಣ ಹೀಗೆ ಇಂತಹ ಪ್ರಕರಣಗಳು ಶೀಘ್ರ ನ್ಯಾಯ ಒದಗಿಸಬೇಕೆಂದರು.
ಕರವೇ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ ಮಾತನಾಡಿ ಭಾರತದಲ್ಲಿ ಮಹಿಳೆಯರು ಒಂಟಿಯಾಗಿ ನಡೆದಾಡುವ ಸ್ವಾತಂತ್ರ್ಯ ಭಾರತದ ಮಹಿಳೆಗೆ ಸಿಗದಿರುವುದು ದುರ್ದೈವದ ಸಂಗತಿಯಾಗಿದೆ ಭಾರತದ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಎಂಬುದು ನರಕ ಯಾತನೆ ಅನುಭವಿಸುವ ಪ್ರಸಂಗ ತಲೆದೋರಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಪ್ರಾಪ್ತ ಬಾಲಕಿಯರ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದ್ದು ಕಡಿವಾಣ ಹಾಕುವ ಕಠಿಣ ಕಾನೂನುಗಳು ಭಾರತದಲ್ಲಿ ಜಾರಿಯಾಗಬೇಕು ಹೈದ್ರಾಬಾದ ಮಾದರಿಯಲ್ಲಿ ಎನ್‍ಕೌಂಟರ್ ಮೂಲಕ ಶಿಕ್ಷೆ ವಿಧಿಸುವ ಅಧಿಕಾರಿಯನ್ನು ಸಂಸತ್ತನಲ್ಲಿ ನ್ಯಾಯ ಒದಗಿಸುವ ಠರಾವು ಜಾರಿ ಯಾಗಬೇಕೆಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬನ್ನಟ್ಟಿ ಮಾತನಾಡಿ ಮೇಲಿಂದ ಮೇಲೆ ಮಹಿಳಾ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು ಇಂತಹ ಪ್ರಕರಣಗಳನ್ನು ಬಲಾಡ್ಯ ರಾಜಕಾರಣದ ಮಕ್ಕಳ ಕೊಲೆ ಪ್ರಕರಣಗಳನ್ನು ಮುಚ್ಚಿ ಹಾಕುವ ಹುನ್ನಾರಗಳು ಗೌಪ್ಯವಾಗಿ ನಡೆಯುತ್ತಿವೆ. ಪೋಲಿಸ ಇಲಾಖೆ ಕ್ರೂರಿಗಳನ್ನು ಬಯಲಿಗೆಳೆವ ಹರಸಾಹಸವನ್ನು ಭಾರತ ಸರಕಾರದ ಪೋಲಿಸ ಇಲಾಖೆ ನಿರ್ಭಿಡೆ ಕಾರ್ಯ ನಿವ್ಹಿಸುತ್ತಿರುವ ಕಾರ್ಯ ನಮ್ಮ ವೇದಿಕೆ ಸ್ವಾಗತಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಹೇಬಲಾಲ ದಳವಾಯಿ, ಎ.ಎಸ್. ಪಟೇಲ್, ಎಚ್.ಎಸ್. ದಳವಾಯಿ. ಸಂಜಯ ಕರಾಬಿ, ಉಪಸ್ಥಿತರಿದ್ದರು.