ಅತ್ಯಧಿಕ ಸ್ಥಾನಗಳಲ್ಲಿ ಷರೀಫ್ ಪಕ್ಷ ಗೆಲವು

ಸ್ಟಮಕ್- ಪಾಕ್ ಚುನಾವಣೆ

ಇಸ್ಲಮಾಬಾದ್,ಫೆ.೯-ಪಾಕಿಸ್ತಾನ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷ ಪಾಕಿಸ್ತಾನದಲ್ಲಿ ಏಕೈಕ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮುವ ಜೊತೆಗೆ ಹೊಸ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಪಿಎಂಎಲ್-ಎನ್ ಪಕ್ಷ ಅತ್ಯಧಿಕ ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎನ್ನಲಾಗಿದೆ. ಈ ಮೂಲಕ ಫಲಿತಾಂಶ ಭಾರತ-ಪಾಕಿಸ್ತಾನ ಸಂಬಂಧಗಳ ಭವಿಷ್ಯದ ಹಾದಿ ನಿರ್ಧರವಾಗಲಿದೆ ಎಂದು ಹೇಳಲಾಗಿದೆ.
ಸೇನಾ ಆಡಳಿತ ಕರಿನೆರಳು ಕಾಡಿದರೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷ ಸರ್ಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಹೀಗಾಗಿ ಅವರೇ ಅಧಿಕಾರಕ್ಕೆ ಬಂದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ಪಂಜಾಬ್ ಪ್ರಾಂತ್ಯದ ಕಸೂರ್‌ನಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನದ ರ್‍ಯಾಲಿಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌ಎನ್) ನ ಮಾಜಿ ಪ್ರಧಾನಿ ನವಾಜ್ ಷರೀಫ್ ಮಾತನಾಡಿರುವುದು ಮತ್ತು ಅದಕ್ಕೆ ಜನರಿಂದ ವ್ಯಕ್ತವಾದ ಅಭಿಪ್ರಾಯ ಜೊತೆಗೆ ಹದಗೆಟ್ಟ ಆರ್ಥಿಕ ಸ್ಥಿತಿ ಸರಿದಾರಿಗೆ ತರಲು ಉತ್ತಮ ಅವಕಾಶ ಎಂದು ಭಾವಿಸಲಾಗಿದೆ.
ಪಾಕಿಸ್ತಾನದ ೧೨ ನೇ ಸಾರ್ವತ್ರಿಕ ಚುನಾವಣೆಗೆ ನಿನ್ನೆ ನಡೆದ ಮತದಾದಲ್ಲಿ ಸುಮಾರು ೧೨೮ ದಶಕ್ಷ ಜನರು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ, ಹೆಚ್ಚುತ್ತಿರುವ ದಾಳಿಗಳು ಮತ್ತು ೨೦೧೮ ರಲ್ಲಿ ಕಳೆದ ಚುನಾವಣೆಯಲ್ಲಿ ವಿಜೇತರಾದ ಇಮ್ರಾನ್ ಖಾನ್ ಅವರನ್ನು ಜೈಲಿಗಟ್ಟುವ ನಡುವೆ ನಡೆದ ಚುನಾವಣೆ ಆದ್ದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಕಡಿಮೆ ಮತದಾನದ ಬಗ್ಗೆ ಆತಂಕದ ಹೊರತಾಗಿಯೂ, ಹೆಚ್ಚಿನ ವರದಿಗಳು ಪಾಕಿಸ್ತಾನದ ಸೇನೆಯೊಂದಿಗೆ ಜಗಳವಾಡಿದ ನಂತರ ೨೦೧೭ ರಲ್ಲಿ ಪ್ರಧಾನ ಮಂತ್ರಿಯಾಗಿ ಪದಚ್ಯುತಗೊಂಡ ಷರೀಫ್ ಮತ್ತು ಪಿಎಂಎಲ್-ಎನ್ ಏಕೈಕ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿವೆ.

ಬಾಂಬ್ ದಾಳಿ: ೨೪ ಮಂದಿ ಸಾವು
ಈ ನಡುವೆ ಬಲೂಚಿಸ್ತಾನ್ ಪ್ರಾಂತ್ಯದ ರಾಜಕೀಯ ಕಚೇರಿಗಳನ್ನು ಗುರಿಯಾಗಿಸಿಕೊಂಡು ಎರಡು ಬಾಂಬ್ ಸ್ಫೋಟಗಳಲ್ಲಿ ೨೪ ಜನರು ಸಾವನ್ನಪ್ಪಿದ್ದಾರೆ.
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ -ಪಿಟಿಐ ಪಕ್ಷದ ಮೇಲೆ ದಬ್ಬಾಳಿಕೆ ಹೆಚ್ಚಾಗಿದ್ದು ಸಂಸತ್ ಚುನಾವಣೆ ಮುಕ್ತ ಮತ್ತು ನ್ಯಾಯಯುತವಾಗಿ ನಡೆದಿಲ್ಲ ಎಂಬ ಆತಂಕ ಕೂಡ ಹೆಚ್ಚಾಗಿದೆ.