ಅತ್ತ ಪ್ರಾಣವೂ ಇಲ್ಲ, ಇತ್ತ ಪರಿಹಾರವೂ ಇಲ್ಲ!

ಚಾಮರಾಜನಗರ, ಮೇ 26- ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ಘೋರ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 2 ಲಕ್ಷ ರೂಪಾಯಿ ಒರಿಹಾರ ಬಿಡುಗಡೆ ಮಾಡಿದೆ.
ಆದರೆ ಅಂದು ರಾತ್ರಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಹೆಸರನ್ನ ಕೈಬಿಡಲಾಗಿದ್ದು ಅತ್ತ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರ ಪ್ರಾಣವೂ ಹೋಯ್ತು, ಇತ್ತ ಪರಿಹಾರವು ಇಲ್ಲದೆ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮುಂದೆ ಜೀವನಕ್ಕೆ ಏನು ಮಾಡುವುದು ಎಂದು ದಿಕ್ಕು ತೋಚದೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.
ಚಾಮರಾಜಗರ ತಾಲೋಕು ಬಿಸಿಲವಾಡಿಯ ಸಿದ್ದನಾಯಕ ಪರಿಹಾರದ ಪಟ್ಟಿಯಿಂದ ಕೈ ಬಿಟ್ಟಿರುವ ಮೃತ ವ್ಯಕ್ತಿಯಾಗಿದ್ದಾರೆ.
ಏಪ್ರಿಲ್ 26ರಂದು ಕೊರೋನಾ ಸೋಂಕಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧನಾಯಕ, ಮೇ 2 ರಂದು ರಾತ್ರಿ 11 ಗಂಟೆ 12 ನಿಮಿಷಕ್ಕೆ ಆಕ್ಸಿಜನ್ ಕೊರತೆಯಿಂದ ಮೃತ ಪಟ್ಟಿದ್ದರು ಅಂದು ರಾತ್ರಿ 11 ಗಂಟೆ 12 ನಿಮಿಷಕ್ಕೆ ಸಿದ್ದನಾಯಕ ಮೃತಪಟ್ಟಿರುವ ಬಗ್ಗೆ ವೈದ್ಯಾಧಿಕಾರಿಗಳು ಸಹ ಧೃಡಿಕರಿಸಿದ್ದಾರೆ. ಆದರೆ ಪರಿಹಾರದ ಪಟ್ಟಿಯಲ್ಲಿ ಮಾತ್ರ ಸಿದ್ಧನಾಯಕನ ಹೆಸರಿಲ್ಲವಾಗಿದೆ.
ನನ್ನ ಗಂಡನ ಸಾವಿಗೆ ಸರ್ಕಾರವೇ ಹೊಣೆ, ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಜೀವನ ನಡೆಸುವುದಾದರೂ ಹೇಗೆ? ಎಂದು ಸಿದ್ದನಾಯಕನ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಜಿಲ್ಲಾಸ್ಪತ್ರೆಯಿಂದ ಪಟ್ಟಿ ಕೊಡುವಾಗಲೇ ತಪ್ಪಾಗಿದೆ. ಆಕ್ಸಿಜನ್ ಕೊರತೆಯಿಂದ 24 ಮಂದಿಯμÉ್ಟೀ ಅಲ್ಲ 34 ಮಂದಿ ಸತ್ತಿದ್ದಾರೆ ಹಾಗಾಗಿ ಉಳಿದವರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ