ಅತ್ತೆಯನ್ನೇ ವಿವಾಹವಾದ ಅಳಿಯ

ಛತ್ರಪಾಲ್,ಮೇ.೧-ಪ್ರತಿನಿತ್ಯ ದೇಶದಲ್ಲಿ ಹಲವಾರು ಚಿತ್ರ, ವಿಚಿತ್ರ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಅಳಿಯನೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನು ಪ್ರೀತಿಸಿ ಮದುವೆಯಾದ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಪತ್ನಿಯ ತಾಯಿಯನ್ನೇ ಪ್ರೀತಿಸಿ ಮದುವೆಯಾದ ನೈಜ ಘಟನೆಯೊಂದು ಬೆಳಕಿಗೆ ಬಂದಿದೆ.
ಪತ್ನಿಯ ಸಾವಿನ ನಂತರ ವ್ಯಕ್ತಿಯೊಬ್ಬ ತನ್ನ ಅತ್ತೆಯನ್ನು ಪ್ರೀತಿಸಿ ಮಾವನ ಒಪ್ಪಿಗೆ ಪಡೆದು ಮದುವೆಯಾದ ಘಟನೆ ಬಿಹಾರ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರಮೋತಿ ಗ್ರಾಮದಲ್ಲಿ ನಡೆದಿದೆ.
ಹೀರಮೋತಿ ಗ್ರಾಮದ ೪೫ ವರ್ಷದ ಸಿಕಂದರ್ ಯಾದವ್ ಮತ್ತು ೫೫ವರ್ಷದ ಅತ್ತೆ ಗೀತಾದೇವಿ ಈಗ ನವ ದಂಪತಿಗಳು. ಈ ಹಿಂದೆ ಗೀತಾದೇವಿ ದಿಲೇಶ್ವರ್ ದರ್ವೆ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಒಬ್ಬ ಮಗಳಿದ್ದು, ಕೆಲವು ವರ್ಷಗಳ ಹಿಂದೆ ತನ್ನ ಮಗಳನ್ನು ಸಿಕಂದರ್ ಯಾದವ್ ಎಂಬಾತನಿಗೆ ಮದುವೆ ಮಾಡಿದ್ದಾರೆ.ದಂಪತಿಗೆ ಎರಡು ಮಕ್ಕಳು ಇವೆ.
ಆದರೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ
ಪತ್ನಿ ಸಾವಿನ ನಂತರ ಸಿಕಂದರ್ ಯಾದವ್ ಒಂಟಿಯಾಗುತ್ತಾನೆ. ಹೆಂಡತಿ ಸತ್ತರೂ ಸಹ ಮಾವನಾದ ದಿಲೇಶ್ವರ್ ದರ್ವೆ ಮನೆಯಲ್ಲಿ ಇರಲು ಪ್ರಾರಂಭಿಸುತ್ತಾನೆ. ಕೆಲವು ಸಮಯ ಇಲ್ಲೇ ಇರುತ್ತಾನೆ. ಪತ್ನಿ ಇಲ್ಲದೇ ಏಕಾಂಗಿಯಾಗಿದ್ದ ಸಿಕಂದರ್ ಯಾದವ್ ಸಂಗಾತಿಗಾಗಿ ಹುಡುಕಾಡುತ್ತಿರುತ್ತಾನೆ. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗಿದ್ದರು ಎನ್ನಲಾಗಿದೆ.
ಮಾವನಿಗೆ ತನ್ನ ಅಳಿಯ- ಪತ್ನಿಯ ಪ್ರಣಯದ ಬಗ್ಗೆ ತಿಳಿಯುತ್ತಿದ್ದಂತೆ ಇಬ್ಬರನ್ನು ಹಿಡಿದು ಪಂಚಾಯತಿ ಕಟ್ಟೆಗೆ ಕರೆತಂದಿದ್ದಾನೆ
ಈ ಪಂಚಾಯತಿ ಸಭೆಯಲ್ಲಿ ಸಿಕಂದರ್ ಯಾದವ್ ಗ್ರಾಮಸ್ಥರ ಮುಂದೆ ಅತ್ತೆಯನ್ನು ಪ್ರೀತಿಸಿದ್ದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾನೆ .
ಸಿಕಂದರನ ಮಾತನ್ನು ಕೇಳಿದ ಪಂಚಾಯತಿ ಸದಸ್ಯರು ಆತನ ಒಪ್ಪಿಗೆ ಹಾಗೂ ಗೀತಾದೇವಿಯ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಇಬ್ಬರ ಮದುವೆ ಮಾಡಿದ್ದಾರೆ. ಇಬ್ಬರೂ ಪಂಚಾಯತಿಯಲ್ಲಿ ವಿವಾಹವಾಗಿದ್ದರೂ ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ವಿವಾಹವಾದರು. ಈ ಮದುವೆಯನ್ನು ಗೀತಾದೇವಿಯವರ ಮೊದಲ ಪತಿ ದಿಲೇಶ್ವರ್ ನಡೆಸಿ ಕೊಂಡಿದ್ದಾರೆ.ಮದುವೆಯ ನಂತರ, ಗೀತಾದೇವಿಯನ್ನು ಅವರ ಮಾಜಿ ಅಳಿಯ, ಅಂದರೆ ಪ್ರಸ್ತುತ ಪತಿ ಸಿಕಂದರ್ ಎಲ್ಲರ ಮುಂದೆ ತನ್ನ ನಿವಾಸಕ್ಕೆ ಕರೆದೊಯ್ದರು.