ಅತ್ತುತ್ಯಮ ಸಂಶೋಧನೆ ದೇಶದ ಅಭಿವೃದ್ಧಿಗೆ ಪೂರಕ

ಬಳ್ಳಾರಿ, ಡಿ.28: ಅತ್ಯುತ್ತಮ ಸಂಶೋಧನೆ ದೇಶದ ಅಭಿವೃದ್ಧಿಗೆ ಪೂರಕ ಎಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್. ಬಸವರಾಜ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಜರುಗಿದ “ಏ.ಐ.ಸಿ.ಟಿ.ಈ ಸ್ಫಾನ್ಸರ್ಡ್ ಇಂಟರ್ನೇಷನಲ್ ಕಾನ್ಫರನ್ಸ್ ಆನ್ ಪಾಟರ್ನ್ ರಿಕಗ್ನೇಷನ್ ಅಪ್ಲೀಕೇಷನ್ಷ್ ಮೆಥಡ್ಸ್” ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಅತ್ಯುತ್ತಮವಾದ ಸಂಶೋಧನೆ ದೇಶದ, ಜನರ, ವಿಶ್ವದ ಸರ್ವತೋಮುಖ ಅಭಿವೃದ್ಧಿ ಆಗುವುದು. ಹಲವಾರು ದಶಕ ಗಳಿಂದ ವಿಶ್ವದಲ್ಲಿ ಮಾಡಿದ ಸಂಶೋಧನೆಗಳಿಂದ ಈವತ್ತು ನಾವುಗಳು ನವೀನ ಜೀವನಶೈಲಿಗೆ ಮಾರ್ಪಾಟು ಆಗಿದ್ದೇವೆ. ಇನ್ನು ಆಗಬೇಕಾಗಿವೆ. ಅದೇ ನಿಟ್ಟಿನಲ್ಲಿ ಈ ರೀತಿಯ ಕಾರ್ಯಾಗಾರಗಳು ಸಂಶೋಧಕರಿಗೆ ಉತ್ತಮವಾದ ವೇದಿಕೆಯನ್ನು ಒದಗಿಸುತ್ತವೆ. ಶಿಕ್ಷಕರು, ವಿದ್ಯಾರ್ಥಿಗಳು ಸಂಶೋಧನಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ಸಂಶೋಧನಾ ಜ್ಞಾನವನ್ನು ಅಭಿವ್ಯಕ್ತಿಸುವುದರ ಮೂಲಕ ಸಮಾನ್ಯ ಜನರ ಕುಂದುಕೋರತೆಗಳಿಗೆ ಪರಿಹಾರದ ನಿಟ್ಟಿನಲ್ಲಿ ಯೋಚಿಸಬೇಕೆಂದು” ಸ್ಪೂರ್ತಿ ನೀಡಿದರು. ಹಾಗು ಕಾನ್ಫರನ್ಸ್ ಪ್ರೋಸಿಡಿಂಗ್ಸ್ ನ್ನು ಬಿಡುಗಡೆಮಾಡಿದರು.
ಪ್ರಾಂಶುಪಾಲರಾದ ಡಾ|| ಕುಪ್ಪಗಲ್ ವಿರೇಶ್, ಅವರು “”ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಉತ್ತಮ ಪ್ರತಿಫಲಗಳನ್ನು ನೀರಿಕ್ಷಿಸಬಹುವುದು, ಆಧುನಿಕ ಸಂಶೋಧನೆಯಿಂದ ಜನರ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ನೀರಿಕ್ಷಿಸಬಹುದಾಗಿದೆ” ಎಂದರು.
ಉಪ-ಪ್ರಾಂಶುಪಾಲರು ಹಾಗು ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ|| ಟಿ. ಹನುಮಂತರೆಡ್ಡಿ “ಪಾಟರ್ನ್ ರಿಕಗ್ನೇಷನ್, ಅಪ್ಲೀಕೇಷನ್ಷ್, ಮೆಥಡ್ಸ್,””ನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾ “ಪಾಟರ್ನ್ ರಿಕಗ್ನೇಷನ್ ನಲ್ಲಿ – ಕಾಗ್ನಿಷನ್, ರಿಕಗ್ನೀಷನ್, ಪಾಟರ್ನ್ ಎಂದು ಮೂರು ಹಂತಗಳಿರುತ್ತವೆ. ಕಾಗ್ನಿಷನ್ ಎಂದರೆ- ಲರ್ನಿಂಗ್ – ಬೈ – ಡಿಫರೆಂಟ್ ವೇಸ್ ಅಂಡ್ ಇಂಟರ್ವೆಲ್ಸ್, ರಿಕಗ್ನೀಷನ್ ಎಂದರೆ- ದಿ ಔಟ್ಕಂ ಆಫ್ ದ ಲರ್ನಿಂಗ್ ಇನ್ ಟು ದ ಡೇಟಾಬೇಸ್, ಹಾಗು ಮೂರನೇ ಹಂತ ಪಾಟರ್ನ್ ನಲ್ಲಿ ಸರಿಯಾದ ರೀತಿ ಗಳಾದ ಟೆಸ್ಟ್ ಕೇಸ್ ಗಳು, ಸಾಂಪಲ್ಗಳು ಆರೈಕೆ ಮಾಡುವುದು. ಈ ರೀತಿಯ ವಿಧಾನ ಗಳಿಂದ ಉತ್ತಮವಾದ ಸಂಶೋಧನಾ ಫಲಗಳು ಬರುತ್ತವೇ.” ಎಂದು ವಿವರಿಸಿದರು. ಮೊದಲನೇಯ ದಿನದ ಕೀ-ನೋಟ್ ಮಾಲೆಯನ್ನು ಐ.ಐ.ಐ.ಟಿ-ಅಲಹಾಬಾದ್‍ನ ಡಾ||ಪಿ.ನಾಗಭೂಷಣ್ ಇವರು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಅರವಟಿಗಿ ಪ್ರಭು, ಕೆ.ಎಂ.ಶಿವಮೂರ್ತಿ, ಪ್ರಾಂಶುಪಾಲರಾದ ಡಾ|| ಕುಪ್ಪಗಲ್ ವೀರೇಶ್, ಉಪಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಡೀನ್-ಅಕಾಡಮಿಕ್ ಡಾ||ಹೆಚ್.ಗಿರೀಶಾ, ಡೀನ್-ಪರೀಕ್ಷಾ ವಿಭಾಗ ಡಾ||ಬಿ.ಶ್ರೀಪತಿ, ಐ.ಕ್ಯೂ.ಏ.ಸಿ ವಿಭಾಗದ-ಡಾ||ವೀರಗಂಗಾಧರ ಸ್ವಾಮಿ ಹಾಗು ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿಭಾಗದ ಪ್ರೊಫೆಸರ್ ಗಳಾದ- ಡಾ||ಅನುರಾಧ ಎಸ್.ಜಿ, ಡಾ|| ಸಾಯಿ ಮಾಧವಿ, ಡಾ||ಕುಲಕರ್ಣೆ, ಡಾ||ಚಿದಾನಂದ, ಇನ್ನಿತರರು ಭಾಗವಹಿಸಿದ್ದರು. ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಬೋಧಕ- ಬೋಧಕೇತರರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.