ಅತ್ತಿಗೆ ಸೀಮಂತ ಕಾರ್ಯದಲ್ಲಿ ಮಿಂಚಿದ ಕಂಗನಾ

ಮುಂಬೈ,ಜು.೨೪-ನಟಿ ಕಂಗನಾ ರನೌತ್ ಅವರ ಕುಟುಂಬವು ಕಂಗನಾ ಅತ್ತಿಗೆ ಅವರಿಗಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಗೋದ್ ಭಾರೈ ಸಮಾರಂಭವನ್ನು ಆಯೋಜಿಸಿತ್ತು. ಅವರ ಕುಟುಂಬ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .ಕಂಗನಾ ಅತ್ತಿಗೆ ರಿತು ರಣಾವತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ತಮ್ಮ ಅತ್ತಿಗೆ ರಿತು ರಣಾವತ್ ಅವರ ಸೀಮಂತ ಸಮಾರಂಭದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಕಂಗನಾ ರಣಾವತ್ ಅವರು ತಮ್ಮ ಅತ್ತಿಗೆ ರಿತು ರಣಾವತ್ ಅವರ ಗೋಧ್ ಭಾರೈ (ಬೇಬಿ ಶೋವರ್) ಸಮಾರಂಭದ ಚಿತ್ರಗಳನ್ನು ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಂಗನಾ ತಮ್ಮ ಅತ್ತಿಗೆಗೆ ಅಮೂಲ್ಯ ಕೊಡುಗೆಯನ್ನು ಸಹ ನೀಡಿದರು.ನಟ-ಚಲನಚಿತ್ರ ನಿರ್ಮಾಪಕ, ಮಣಿಕರ್ಣಿಕಾ ಫಿಲ್ಮ್ಸ್‌ನೊಂದಿಗೆ ನಿರ್ಮಾಣ ಕಂಪನಿಯನ್ನು ನಡೆಸುತ್ತಿರುವ ಕಂಗನಾ ಅವರ ಸಹೋದರ ಅಕ್ಷತ್ ರನೌತ್ ಅವರನ್ನು ರಿತು ವಿವಾಹವಾಗಿದ್ದಾರೆ.ಸಮಾರಂಭದಲ್ಲಿ ಖುಷಿ -ಸಂಭ್ರಮ- ಲವಲವಿಕೆಯಿಂದ ಪಾಲ್ಗೊಂಡಿದ್ದ ಚೆಲುವೆ ಕಂಗನಾ ಮಿನುಗುವ ತಾಮ್ರ ಮತ್ತು ಬೆಳ್ಳಿಯ ಅಂಚುಗಳೊಂದಿಗೆ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಮತ್ತು ಭಾರವಾದ ಚಿನ್ನದ ಚೋಕರ್ ನೆಕ್ಲೇಸ್ ಮತ್ತು ಹೊಂದಿಕೆಯಾಗುವ ಕಿವಿಯೋಲೆಗಳೊಂದಿಗೆ ಸಾಂಪ್ರದಾಯಿಕ ಅಲಂಕಾರದಲ್ಲಿ ಮಿಂಚಿದ್ದಾರೆ. ಕಂಗನಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದು, ರಿತು ರಣಾವತ್ ಅವರ ಗೋಧ್ ಭಾರೈಯ ಕೆಲವು ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಅದನ್ನು ಅನುಭವಿಸಬೇಕು ,ನಾವೆಲ್ಲರೂ ಬೇಬಿ ರಾನೌತ್ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ … ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದಗಳಿಗೆ ಧನ್ಯವಾದ ತಿಳಿಸಿದ್ದಾರೆ.