ಅತ್ತನೂರು ಮಹಾನಾಯಕ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್

ಸಿರವಾರ.ಮಾ೨೮- ಪ್ರತಿಯೊಬ್ಬರ ಮಾನಸಿಕ ನೆಮ್ಮದಿಗೆ ಕ್ರೀಡೆಗಳು ಅಗತ್ಯ, ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯವನ್ನು ಹೆಚ್ಚಿಸಲು ಸಾದ್ಯ ಎಂದು ವಿ.ಎಸ್.ಎಸ್. ಎನ್ ಅಧ್ಯಕ್ಷ ನಾಗನಗೌಡ ಪೊಲೀಸ್ ಪಾಟೀಲ್ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಅತ್ತನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಳಿ ಹಾಗೂ ಲವ್ಲಿ ಸ್ಟಾರ್ ಟೀಮ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಮಹಾನಾಯಕ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿ
ಗ್ರಾಮೀಣ ಪ್ರದೇಶದಲ್ಲಿನ ಯುವಕರ ಪ್ರತಿಭೆಗಳ ಅನಾವರಣಕ್ಕೆ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಕ್ರೀಡೆಯಿಂದ ಧೈರ್ಯ, ಸ್ಥೈರ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಚಟುವಟಿಕೆ ಕ್ರೀಡೆ ಬಹುಮುಖ್ಯವಾಗಿವೆ. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಸಮಸ್ಯೆ ಹೋಗಲಾಡಿಸಬಹುದು ಎಂದರು.
ಬಿ.ಜೆ.ಪಿಯ ಮಾನವಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ವಿ.ಎಸ್.ಎಸ್.ಎನ್ ನಿರ್ದೇಶಕ ಸಾಬಣ್ಣ, ಹನ್ಮಂತ್ರಾಯ ಗಚ್ಚಿನಮನೆ, ಹನುಮಂತ ಶಿಕ್ಷಕರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ರವಿ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಬಸವರಾಜ ಪಾಟೀಲ್, ರಾಚನಗೌಡ ಪೊಲೀಸ್ ಪಾಟೀಲ್, ನವೀನ್ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಾದ ವಿರುಪಾಕ್ಷಿ ಜಗ್ಲಿ, ಪೆದ್ದಯ್ಯ ನಾಯಕ, ಮಹಾಂತೇಶ ಮ್ಯಾತ್ರಿ, ಹನುಮೇಶ ಜಗ್ಲಿ, ವೀರಭದ್ರಯ್ಯ ಸ್ವಾಮಿ, ಬಸವರಾಜ ಮರಕಂದಿನ್ನಿ, ಅಮರೇಶ ಗುಡಿಸಲು, ಎಂ.ಡಿ.ಗೌಸ್, ರಾಜು ಪಾಟೀಲ್ ಗಣೇಕಲ್ ಸೇರಿದಂತೆ ಅನೇಕರು ಇದ್ದರು. ಕೆ. ದುರುಗಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.