ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ ರದ್ದು

ಸಿರವಾರ.ಮೇ.೨1- ದೇಶದಲ್ಲಿ ಕೊವೀಡ್ ೧೯ ವೈರಸ್ ಎರಡನೇ ಅಲೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದೂ ಸರ್ಕಾರ ಜಾತ್ರೆ, ಸಾಮೂಹಿಕ ಕಾರ್ಯಕ್ರಮ, ಸಭೆ, ಸಮಾರಂಭ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ದಿಡ್ಡಿ ಬಸವೇಶ್ವರ ಜಾತ್ರೆಯನ್ನು ಸಹ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಸಮಿತ ಅದ್ಯಕ್ಷ ವೀರಭದ್ರಯ್ಯ ಸ್ವಾಮಿ ಅತ್ತನೂರು ತಿಳಿಸಿದ್ದಾರೆ. ಸಂಜೆವಾಣಿ ಯೊಂದಿಗೆ ಮಾತನಾಡಿದ ಅವರು ವಿಶ್ವದ ಏಕೈಕ ಕೆಂಪು ಕಂತೆಯ ದಿಡ್ಡಿ ಬಸವೇಶ್ವರ ಜಾತ್ರಾ ಮಹೋತ್ಸವವು ನಾಳೆಯಿಂದ(೨೧-೫-೨೦೨೧) ಪ್ರಾರಂಭವಾಗಬೇಕಿತು. ಆದರೆ ಕೋವಿಡ್ ೧೯ ವೈರಸ್ ನಿಂದಾಗಿ ಏರಿಕೆ ಮಾಡಿರುವ ಲಾಕ್ ಡೌನ್ ನಿಂದಾಗ ರದ್ದು ಮಾಡಲಾಗಿದೆ. ಪ್ರಧಾನ ಅರ್ಚಕರಾದ ಶ್ರೀ ವೇ.ಮೂ.ಚನ್ನಬಸಯ್ಯ ಸ್ವಾಮಿ ಗುರುವಿನ ಮಠ ಇವರ ನೇತೃತ್ವದಲ್ಲಿ ನಾಳೇಯಿಂದ ಸತತ ಮೂರು ದಿನಗಳ ಕಾಲ ದೇವಸ್ಥಾನದಲ್ಲಿರುವ ದಿಡ್ಡಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಮಹಾ ರುದ್ರಾಭಿಷೇಕ, ಸಹಸ್ರನಾಮಾವಳಿ ಹಾಗೂ ದಿವ್ಯ ಅಲಂಕಾರ ಮತ್ತು ಮಹಾ ಮಂಗಳಾರತಿಯೊಂದಿಗೆ ಮುಕ್ತಾಯವಾಗುವುದು. ಈ ಎಲ್ಲಾ ಕಾರ್ಯಕ್ರಮಗಳು ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಪೂಜೆಕೈಂ ಕಾರ್ಯಗಳು ಜರುಗುವುದು ಎಂದರು.