ಅತ್ತನೂರು ಗ್ರಾ.ಪಂ.ಅಧ್ಯಕ್ಷೆಯಾಗಿ ಪಾರ್ವತಮ್ಮ

ಸಿರವಾರ,ಆ.೦೪- ತಾಲೂಕಿನ ಅತ್ತನೂರು ಗ್ರಾಮ ಪಂಚಾಯತಿ ಗೆ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ಜರುಗಿತು.
ಅಧ್ಯಕ್ಷೆಯಾಗಿ ಪಾರ್ವತಮ್ಮ ಗಂ.ವಿರುಪಾಕ್ಷಯ್ಯ ಸ್ವಾಮಿ ಆಯ್ಕೆಯಾದರು. ಒಟ್ಟು ೨೦ ಸದಸ್ಯ ಬಲದ ಗ್ರಾಮ ಪಂಚಾಯತಿ ಯಲ್ಲಿ ೧೧ ಮತಗಳನ್ನು ಪಡೆದು ಪಾರ್ವತಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾದರು. ೫ಮತಗಳು ತಿರಸೃತಗೊಂಡು, ೪ ಮತಗಳನ್ನು ವಿರೋಧ ಪಕ್ಷದ ಅಭ್ಯರ್ಥಿ ಪಡೆದರು. ಉಪಾಧ್ಯಕ್ಷೆಯಾಗಿ ದೇವಮ್ಮ ಭೀಮರಾಯ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ತಿಮ್ಮಪ್ಪ ಜಗಲಿ ಜವಾಬ್ದಾರಿ ಯನ್ನು ನಿರ್ವಹಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಪಾರ್ವತಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.