ಅತೀ ಹೆಚ್ಚು ಜನ ಮನೆಗಳಲ್ಲಿ ಇರುವ ಕಾರಣ ಅಭಿಯಾನಕ್ಕೆ ಸ್ಪಂದನೆ ಸಿಕ್ಕಿದೆ: ಸಚಿನ ಕುಳಗೇರಿ

ವಿಜಯಪುರ, ಜೂ.9-ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ವತಿಯಿಂದ ಆಕ್ಸಿಜನ್ ಚಾಲೆಂಜ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ವಿಜಯಪುರ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು 2500 ಕ್ಕೂ ಅಧಿಕ ಸಸಿಗಳನ್ನು ಅಭಿಯಾನಕ್ಕೆ ಬೆಂಬಲ ಸೂಚಿಸಿದರು.
ನಗರದ ಬಿ.ಎಲ್.ಡಿ.ಇ ಪೊಲಿಟ್ನೆಕಿಕ ಕಾಲೇಜ, ಅಥಣೆ ರಸ್ತೆಯ ಪುಷ್ಕರ ಕಾಲೋನಿ, ಬಸವ ನಗರದ ಲಚ್ಯಾಣ ಸಿದ್ದೇಶ್ವರ ಮಠ, ಗಾಂಧಿ ನಗರದ ಹನುಮಾನ ಮಂದಿರ,ಬಾವಿಕಟ್ಟಿ ತಾಂಡಾ, ಸ್ಪಿನ್ನಿಂಗ ಮಿಲ ತಾಂಡಾ, ಆರ್.ಟಿ.ಓ ಆಪೀಸ ಹತ್ತಿರ, ಬುರಣಾಪುರ ರಸ್ತೆಯ ಬದಿಗಳಲ್ಲಿ ಹಾಗೂ ವಿವಿಧ ಕಾಲೋನಿಗಳಲ್ಲಿ ಎಬಿವಿಪಿ ಕಾರ್ಯಕರ್ತರು ಸಸಿಗಳನ್ನು ನೆಟ್ಟಿದ್ದಾರೆ.
ಕೊವಿಡನ ಸಂದರ್ಭದಲ್ಲಿ ಆಕ್ಸಿಜನ ಅಭಾವವನ್ನು ಅರಿತ ಎಬಿವಿಪಿ ಕಾರ್ಯಕರ್ತರು ಜೂನ್ 5 ರಿಂದ 5 ದಿನಗಳ ಕಾಲ 5 ಲಕ್ಷ ಸಸಿಗಳನ್ನು ರಾಜಾದ್ಯಂತ ನೆಡುವ ಗುರಿಯನ್ನು ಇಟ್ಟುಕೊಂಡು ಆಕ್ಸಿಜನ ಚಾಲೇಂಜ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಲಾಕಡೌನ ಸಂದರ್ಭದಲ್ಲಿ ಅತೀ ಹೆಚ್ಚು ಜನ ಮನೆಗಳಲ್ಲಿ ಇರುವ ಕಾರಣ ಈ ಅಭಿಯಾನಕ್ಕೆ ಒಳ್ಳೆಯ ಸ್ಪಂಧನೆ ಧೊರಕಿದೆ ಎಂದು ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.
ಈಗಾಗಲೇ ಮೂರು ದಿನದ ಅಭಿಯಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ 6100 ಸಸಿಗಳನ್ನು ನೆಡಲಾಗಿದೆ, ಈ ಅಭಿಯಾನದಲ್ಲಿ ಸಾರ್ವಜನಿಕರು,ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತಾವೂ ಇರುವ ಸ್ಥಳಗಳಲ್ಲಿ ಸಸಿಗಳನ್ನು ಹಚ್ಚಿ ಅವುಗಳ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವುದು ವಿಶೇಷವಾಗಿದೆ.
ಈ ಅಭಿಯನದಲ್ಲಿ ಬುರಣಾಪುರದ ಯೋಗೇಶ್ವರು ಮಾತಾಜಿ, ಎಬಿವಿಪಿಯ ನಗರ ಅಧ್ಯಕ್ಷರಾದ ಅಮಿತಕುಮಾರ ಬಿರಾದಾರ,ಸಿದ್ದು ಪತ್ತಾರ,ಬಸವರಾಜ ಲಗಳಿ, ಪಾಂಡು ಮೋರೆ, ಮಹಂತೇಶ ಕಂಬಾರ,ಮಲ್ಲಿಕಾರ್ಜುನ ಮಾಳಿ, ಇನ್ನಿತರರು ಬಾಗವಹಿಸಿದ್ದರು.