ಅತಿ ಹೆಚ್ಚು ಅಂಕ

ಕುಂದಗೋಳ ಮೇ. 16 : ಪಟ್ಟಣದ ಶಿವಾನಂದ ಬಾಲಿಕಾ ಪ್ರೌಢಶಾಲಾ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಹಾಗೂ ಕುಂದಗೋಳಕ್ಕೆ ಕೀರ್ತಿ ತಂದಿದ್ದಾರೆ ಎಂದು ಮುಖಶಿಕ್ಷಕ ಟಿ.ಎಸ್.ಹಳೆಮನಿ ತಿಳಿಸಿದರು.
ಗುಡೇನಕಟ್ಟಿ ಗ್ರಾಮದ ಸುಧಾ ದಾನಮ್ಮನವರ 572(92%) ಅಂಕ, ಕುಂದಗೋಳ ಹಿರೇಮಠ ಓಣಿಯ ಸ್ನೇಹಾ ತೇಲಿ 531 (85%) ಹಾಗೂ ಕಾಳಿದಾಸ ನಗರದ ಐಶ್ವರ್ಯ ಉಮಚಗಿ 516 (83%) ಅಂಕಗಳನ್ನು ಗಳಿಸಿದ್ದು ಅವರನ್ನು ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಪಟ್ಟಣದ ಜನತೆ ಅಭಿನಂದಿಸಿದ್ದಾರೆ.