ಅತಿಸಾರ ಭೇದಿ ನಿಯಂತ್ರಣಕ್ಕೆ ಸಾಮಾಜಿಕ ಜಾಲತಾಣ ಪ್ರಚಾರಕ್ಕೆ ಡಿಸಿ ಸೂಚನೆ

ರಾಯಚೂರು,ಜು.೨೫- ಮಕ್ಕಳಲ್ಲಿ ಅತಿಸಾರಭೇದಿ ತಡೆಗಟ್ಟಲು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಎಲ್ ಅವರು ಸಂಬಂಧಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದರೆ ನಿರ್ಜಲೀಕರಣ ತಡೆಯಲು ಓಆರ್‌ಎಸ್ ದ್ರಾವಣ ಕುಡಿಯಲು ವ್ಯವಸ್ಥೆ ಮಾಡಬೇಕು. ಅತಿಯಾದ ಭೇದಿಯಿಂದ ಬಳಲುವ ಮಕ್ಕಳಿಗೆ ಝಿಂಕ್ ಮಾತ್ರೆ ನೀಡಬೇಕು. ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಓಆರ್‌ಸ್ ಮತ್ತು ಝಿಂಕ್ ಮಾತ್ರೆಗಳು ಮಕ್ಕಳಿಗೆ ನೀಡಬೇಕು ಎಂದರು.
ಅತಿಸಾರ ಭೇದಿಯಿಂದ ಸಾವಿಗೀಡಾಗುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಜಾಗೃತಿ ಅಭಿಯಾನ ನಡೆಸಬೇಕು ಓಆರ್‌ಸ್ ದ್ರಾವಣದ ತಯಾರಿ ಮತ್ತು ಝಿಂಕ್ ಮಾತ್ರೆಗಳ ಬಳಕೆಯ ಸಾರ್ವಜನಿಕರಲ್ಲಿ ಜಾಗೃತ ಮೂಡಿಸಲು ಸೂಚನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಐದು ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಮಕ್ಕಳು ಯಾಕೆ ಅಂಗನವಾಡಿ ಬರುತ್ತಿಲ್ಲ ಎಂದು ವಿಚಾರಣೆ ಮಾಡಿ ಅತಿಸಾರ ಭೇದಿ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ಝಿಂಕ್ ಮಾತ್ರೆಗಳು ನೀಡಿ ಕೈಗಳನ್ನು ಚನ್ನಾಗಿ ತೊಳಿಯುವಂತೆ ತಂದೆ ತಾಯಿಗಳಿಗೆ ಜಾಗೃತ ಮೂಡಿಸಲು ಸೂಚನೆ ನೀಡಿದರು.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲೆ ಮಕ್ಕಳಿಗೆ ಅತಿಸಾರಭೇದಿ ನಿಯಂತ್ರಣ ಮಾಡಲು ಸಿ.ಆರ್.ಪಿಗಳು ಮಕ್ಕಳಿಗೆ ಜಾಗೃತ ಮೂಡಿಸುವಂತೆ ಸೂಚನೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ೧೦೪ ಕರೆ ಮಾಡುವಂತೆ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರು ಜಾ ಖಾನ್, ಜಿಲ್ಲಾ ಶಸ್ತ್ರ ಚಿಕೆತ್ಸೆಕಕಾರು ಡಾ. ವಿಜಯ್ ಶಂಕರ್, ಆರ್. ಸಿ. ಹೆಚ್ ಅಧಿಕಾರಿ ಡಾ. ನಂದಿತಾ, ಆಯುಷ್ಮಾನ್ ಇಲಾಖೆ ಅಧಿಕಾರಿ ಶಂಕರ್ ಗೌಡ ಪಾಟೀಲ್, ಜಿಲ್ಲಾ ಮಕ್ಕಳ ಸಂರಕ್ಷಣ ಘಟಕ ಅಧಿಕಾರಿ ಮಾನ್ಸರ್ ಆಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೃಷಬೆಂದ್ರ ಸ್ವಾಮಿ, ತಾಲೂಕು ಅರೋಗ್ಯ ಅಧಿಕಾರಿ ಡಾ. ಶಕೀಲ್ ತಾಲೂಕು ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.