ಅತಿಸಾರ(ಭೇದಿ)ಕ್ಕೆ ಮನೆಮದ್ದು

೧. ನೇರಳೆಮರದ ಚಕ್ಕೆಯ ಕಷಾಯದಿಂದ ಅತಿಸಾರ ಕಡಿಮೆ ಆಗುತ್ತದೆ.
೨. ನೇರಳೆ ಹಣ್ಣಿನ ಶರಬತ್ತು ಕುಡಿಯುವುದರಿಂದಲೂ ಕೂಡ ಅತಿಸಾರ ಕಡಿಮೆ ಆಗುತ್ತದೆ.
೩. ರಕ್ತ ಭೇದಿಗೆ ನೇರಳೆ ಮರದ ಚಿಗುರೆಲೆಗಳನ್ನು ತಂದು ನುಣ್ಣಗೆ ಅರೆದು ಆಡಿನ ಹಾಲಿನಲ್ಲಿ ಬೆರೆಸಿ ಕುಡಿದರೆ ರಕ್ತಭೇದಿ ಕಡಿಮೆ ಆಗುತ್ತದೆ.
೪. ಒಣಖರ್ಜೂರವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಶೋಧಿಸಿ ಕುಡಿಯಿರಿ.
೫. ಜಾಯಿಕಾಯಿಯನ್ನು ತೇಯ್ದು ಗಂಧವನ್ನು ಸೇವಿಸಿದರೆ ಭೇದಿ ನಿಯಂತ್ರಣಕ್ಕೆ ಬರುತ್ತದೆ.
೬. ನೇರಳೆ ಎಲೆ ಹಾಗೂ ದಾಳಿಂಬೆ ಚಿಗುರೆಲೆ ಇವುಗಳನ್ನು ನೀರಿನಲ್ಲಿಹಾಕಿ ಕಷಾಯ ಮಾಡಿ ೩-೪ ಬಾರಿ ಕುಡಿಯುತ್ತಾ ಬಂದರೆ ನೀರು ನೀರಾಗಿ ಹರಿಯುತ್ತಿರುವ ಭೇದಿ ಕಡಿಮೆ ಆಗುತ್ತದೆ.
೭. ಬೆಟ್ಟದ ನೆಲ್ಲಿಕಾಯಿ ಮರದ ಚಿಗುರೆಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದರಿಂದ ಭೇದಿ ನಿಯಂತ್ರಣವಾಗುತ್ತದೆ.
೮. ಜಾಪತ್ರೆಯನ್ನು (ಗಂಧಿಗೆ ಅಂಗಡಿಯಲ್ಲಿ ಸಿಗುತ್ತದೆ)ಅರೆದು ಮೊಸರಿನಲ್ಲಿ ಹಾಕಿ ಕಲ್ಲುಸಕ್ಕರೆ ಸೇರಿಸಿ ಸೇವಿಸುವುದರಿಂದ ಭೇದಿ ಹತೋಟಿಗೆ ಬರುತ್ತದೆ.
೯. ಕೊತ್ತಂಬರಿ ಹಾಗೂ ಜೀರಿಗೆಯನ್ನು ಸಮಾಂಶ ಬೆರೆಸಿ ನೀರಿನಲ್ಲಿ ನೆನೆಹಾಕಿ ನಂತರ ಚೆನ್ನಾಗಿ ಕಿವುಚಿ ಶೋಧಿಸಿಕೊಂಡು ಕಲ್ಲುಸಕ್ಕರೆ ಹಾಕಿ ಕುಡಿಯುವುದರಿಂದ ದುರ್ಗಂಧಯುಕ್ತವಾದ ನೀರುನೀರಾಗಿ ಆಗುವ ಬೇಧಿ ನಿಯಂತ್ರಣಕ್ಕೆ ಬರುತ್ತದೆ.
೧೦. ದಾಳಿಂಬೆ ಹಣ್ಣಿನ ರಸದಲ್ಲಿ ಮಂತ್ಯೆಕಾಳಿನ ಪುಡಿಯನ್ನು ಬೆರೆಸಿ ಭದಿ ನಿಯಂತ್ರಣಕ್ಕೆ ಬರುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.