ಅತಿಶೀಘ್ರದಲ್ಲಿ ಕೋವಾಕ್ಸಿನ್: 2 ರಿಂದ 18 ವಯೋಮಾನದವರ ಮೇಲೆ ಪ್ರಯೋಗ

ನವದೆಹಲಿ, ಮೇ.18- ದೇಶದಲ್ಲಿ ಮುಂದಿನ 10-12 ದಿನಗಳ ಅವಧಿಯಲ್ಲಿ 2 ರಿಂದ 18 ವರ್ಷ ವಯೋಮಾನದವರ ಮೇಲೆ ಕೋವಾಕ್ಸಿನ್ ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ತಿಳಿಸಿದ್ದಾರೆ.

ಎರಡು ಮತ್ತು ಮೂರನೇ ಹಂತದ ಪ್ರಯೋಗ ನಡೆಸಲು ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಸಂಸ್ಥೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಸಿಕೆಯ ಪ್ರಯೋಗಕ್ಕೆ ಭಾರತೀಯ ಔಷಧೀಯ ಮಹಾನಿಯಂತ್ರಕ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅತಿಶೀಘ್ರದಲ್ಲೇ 2 ರಿಂದ 18 ವರ್ಷ ವಯೋಮಾನದರ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ತಿಂಗಳ 11ರಂದು ಕೊವಾಕ್ಸಿನ್ ಲಸಿಕೆಯನ್ನು ಎರಡರಿಂದ 18 ವರ್ಷ ವಯೋಮಾನದವರು ಮೇಲೆ ಪ್ರಯೋಗಮಾಡಲು ಭಾರತೀಯ ಔಷಧ ಮಹಾನಿಯಂತ್ರಕ -ಡಿಜಿಸಿಐ ಅನಮತಿ‌ ನೀಡಿದೆ ಹೀಗಾಗಿ ಪ್ರಯೋಗ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ತಜ್ಞರ ಸಲಹೆ ಮತ್ತು ಶಿಫಾರಸಿನ ಆಧಾರದ ಮೇಲೆ ಡಿಜಿಸಿಐ ಕೋವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷ ವಯೋಮಾನದವರ ಮೇಲೆ ಎರಡು ಮತ್ತು ಮೂರನೆ ಹಂತದಲ್ಲಿ ಪ್ರಯೋಗ ಮಾಡಲು ಅನುಮತಿ ನೀಡಲಾಗಿದೆ