ಅತಿವೇಗವೆ ರಸ್ತೆ ಅಪಘಾತಕ್ಕೆ ಕಾರಣ

ನವದೆಹಲಿ,ನ.೧- ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಶೇಕಡಾ ೭೧ ರಷ್ಟು ಅತಿವೇಗಕ್ಕೆ ಸಂಬಂಧಿಸಿವೆ . ಇದರಲ್ಲಿ ೧,೬೮,೪೯೧ ಮಂದಿ ಸಾವನ್ನಪ್ಪಿದ್ದು ೪.೪ ಲಕ್ಷ ಮಂದಿ ಗಾಯಗೊಂಡಿದ್ದಾರೆ, ಇದರಲ್ಲಿ ಸುಮಾರು ೨ ಲಕ್ಷ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.
೨೦೨೨ ರಲ್ಲಿ ದೇಶದ ರಸ್ತೆಗಳಲ್ಲಿ ಸಂಭವಿಸುವ ಪ್ರತಿ ೧೦ ಸಾವುಗಳಲ್ಲಿ ಏಳು ಜನರಲ್ಲಿ ಅತಿವೇಗದ ಕಾರಣ ರಸ್ತೆ ಸಾವುಗಳಿಗೆ ಕಾರಣವಾಗಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸಂಚಾರಿ ನಿಯಮ ಉಲ್ಲಂಘನೆ”ಗಳಲ್ಲಿ ರಾಂಗ್ ಸೈಡ್ ಚಾಲನೆ ಮಾಡಿರುವುದು ಅತಿ ಹೆಚ್ಚಿನ ಸಾವು ನೋವಿಗೆ ಕಾರಣವಾಗಿದೆ ಈ ರೀತಿಯ ಪ್ರಕರಣದಿಂದ ಸುಮಾರು ೬೭,೦೦೦ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಜೊತೆಗೆ “ಸುರಕ್ಷತಾ ಸಾಧನಗಳನ್ನು” ಬಳಸದ ಕಾರಣ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ಹೆಲ್ಮೆಟ್‌ಗಳು ಮತ್ತು ಸೀಟ್ ಬೆಲ್ಟ್‌ಗಳನ್ನು ಬಳಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ವಾರ್ಷಿಕ ಮಾಹಿತಿಯಲ್ಲಿ ಈ ವಿಷಯ ತಿಳಿಸಿದ್ದು ೫೦,೦೦೦ ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದ ಕಾರಣ ಸಾವನ್ನಪ್ಪಿದ್ದಾರೆ. ಅದೇ ರೀತಿ, ೧೬,೭೧೫ ಸಾವುಗಳು ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಸಂಬಂಧಿಸಿವೆ ಎಂದು ಹೇಳಿದೆ.
ದ್ವಿಚಕ್ರ ವಾಹನದಿಂದ ೪೨,೩೦೦ ಗಾಯಗಳಿಗೆ ಕಾರಣವಾಗಿದೆ. ಆರೋಗ್ಯ ಮತ್ತು ರಸ್ತೆ ಸುರಕ್ಷತೆ ತಜ್ಞರು ಹೇಳಿದ್ದಾರೆ. ಅತ್ಯಧಿಕ ಸಂಖ್ಯೆಯ ರಸ್ತೆ ಸಾವುಗಳು ರಸ್ತೆ ಅಪಘಾಥದಿಂದ ಸಂಭವಿಸಿವೆ ಎನ್ನಲಾಗಿದೆ.ರಸ್ತೆ ಅಪಘಾತದಿಂದ ಜಾಗತಿಕವಾಗಿ ಸಾವುಗಳ ಸಂಖ್ಯೆಯಲ್ಲಿ ಶೇಕಡಾ ೧೧ ರಷ್ಟು ಪಾಲು ಭಾರತ ಹೊಂದಿದೆ. ಆದರೂ ವಾಹನ ಜನಸಂಖ್ಯೆಯಲ್ಲಿ ಅದರ ಪಾಲು ಶೇಕಾ ೨ಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ರಸ್ತೆ ಅಪಘಾತಗಳು ಮತ್ತು ಸಾವುಗಳ ತುಲನಾತ್ಮಕ ವಿಶ್ಲೇಷಣೆಯು ರಸ್ತೆ ಸಾವುಗಳಿಗೆ ಮುಖ್ಯ ಕಾರಣವಾದ ವೇಗದ ಪಾಲು ೨೦೧೮ ರಲ್ಲಿ ಶೇಕಡಾ ೬೪ ರಿಂದ ೨೦೨೨ ರಲ್ಲಿ ಶೇಕಡಾ ೭೧ ಕ್ಕೆ ಏರಿದೆ ಅಂಕಿ ಅಂಶಗಳು ಈ ವಿಷಯ ತಿಳಿಸಿವೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ೩೫,೪೮೮ ಮಂದಿ ಅಂದರೆ ಸುಮಾರು ಶೇಕಡಾ ೭೮ ರಷ್ಟು ಸಾವುಗಳು ಅತಿವೇಗದ ಕಾರಣ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯಗಳಲ್ಲಿ ಶೇಕಡಾ ೬೦ ರಷ್ಟು ನಷ್ಟು ಸಾವುಗಳಿಗೆ ಕಾರಣವಾಗಿವೆ ಎನ್ನಲಾಗಿದೆ. ಕುಡಿದು ವಾಹನ ಚಲಾಯಿಸುವುದರಿಂದ ಹಿಡಿದು ಟ್ರಾಫಿಕ್ ಲೈಟ್‌ಗಳನ್ನು ಜಂಪಿಂಗ್ ಮಾಡುವವರೆಗೆ ಮತ್ತು ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ಗಳ ಬಳಕೆಯವರೆಗೆ ಹೆಚ್ಚು ಸಂಚಾರ ನಿಯಮಗಳ ಉಲ್ಲಂಘನೆಯಾಗಿದೆ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದರಿಂದ ೨೦೨೧ ರಲ್ಲಿ ೬೭೯ ರಿಂದ ಕಳೆದ ವರ್ಷ ೧,೪೬೨ ಕ್ಕೆ ದ್ವಿಗುಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.