ಅತಿವೃಷ್ಟಿ ತಾಲ್ಲೂಕು ಘೋಷಣೆ ಮಾಡಿ

ಔರಾದ : ಆ.2:ತಾಲೂಕಾ ಪಂಚಾಯತ ಔರಾದ ಕೆಡಿಪಿ ಸಭೆಗೆ ಆಗಮಿಸಿದ ಸಚಿವ ಪ್ರಭು ಚವಾಣ್ಣ ರವರಿಗೆ ಕೊಡಲೇ ಔರಾದ ಅತಿವೃಷ್ಟಿ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಸುಮಾರು ಒಂದು ತಿಂಗಳಿನಿಂದ ಔರಾದ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಹೊಲದಲ್ಲಿ ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ನಾಶವಾಗಿದೆ, ಇದರಿಂದ ರೈತರು ಕಂಗಾಲಾಗಿದ್ದಾರೆ, ತಾವು ಸರ್ಕಾರದ ಗಮನಕ್ಕೆ ತಂದು ಔರಾದ ತಾಲ್ಲೂಕು ಕೂಡಲೇ ಅತಿವೃಷ್ಟಿ ತಾಲೂಕವೆಂದು ಘೋಷಣೆ ಮಾಡಿ ತಾಲೂಕಿನ ರೈತರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಸರ್ಕಾರದಿಂದ ಘೋಷಣೆ ಮಾಡಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರೆಯವರು ಆಗ್ರಹಿಸಿದರು

ಈ ಸಂದರ್ಭದಲ್ಲಿ ತಾಲೂಕಾ ಸಂಚಾಲಕ, ಜೈಪ್ರಕಾಶ ಅಷ್ಟೂರೇ, ಧನರಾಜ ನಾಗಮಾರಪಳ್ಳಿ, ಸೇರಿದಂತೆ ಇನ್ನಿತರರಿದ್ದರು.