ಅತಿಯಾದ ಮಾಂಸ ಸೇವನೆ ಬೇಡ

ಬಹಳಷ್ಟು ಜನರಿಗೆ ಮಾಂಸದೂಟ ಎಂದರೆ ಸಾಕು ಎರಡು ಹೊಟ್ಟೆ. ತಿನ್ನಲು ಮಾಂಸದೂಟ ನಾಲಿಗೆಗೆ ರುಚಿ ನೀಡಬಹುದು. ಆದರೆ ಆರೋಗ್ಯಕ್ಕೆ ಮಾತ್ರ ತುಂಬ ಅಪಾಯಕಾರಿ ಎನ್ನುವುದು ತಜ್ಞರ ಅಭಿಪ್ರಾಯ.

ಸಾಮಾನ್ಯವಾಗಿ ಮಾಂಸ ಆಹಾರ ಒಂದು ಮಿತಿಗೆ ಮಾತ್ರ ಸೀಮಿತವಾಗಿದ್ದರೆ ಒಳಿತು. ಆದರೆ ಮಾಂಸವೇ ಮುಖ್ಯ ಆಹಾರವಾದರೆ ಆರೋಗ್ಯಕ್ಕೆ ತುಂಬ ಹಾನಿಯಾಗಲಿದೆ. ಸಸ್ಯಾಹಾರ ಆರೋಗ್ಯ ಸ್ನೇಹಿಯಾಗಿದ್ದರೆ, ಮಾಂಸ ಆಹಾರ ದೇಹದಲ್ಲಿ ಸೊಂಕು ಹೆಚ್ಚಿಸುವ ಆಹಾರವಾಗಿದೆ.

ಮಾಂಸಾಹಾರಿ ವ್ಯಕ್ತಿಗಳಲ್ಲಿ ಜಡತೆ ಹಾಗೂ ಮಂಕು ಭಾವನೆಗಳು ಹೆಚ್ಚಾಗಿ ಕಾಡುತ್ತವೆ. ಅದೇ ಸಸ್ಯಹಾರಿಗಳಲ್ಲಿ ಕಡಿಮೆ ಪ್ರಮಾಣದ ಆರೋಗ್ಯ ಸಮಸ್ಯೆಗಳು ಹಾಗೂ ಚೈತನ್ಯಶೀಲ ಭಾವನೆಗಳು ಹೆಚ್ಚಾಗಿರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದಿದೆ.

ಡಬ್ಬದಲ್ಲಿ ಶೇಖರಿಸಲ್ಪಟ್ಟಿರುವ ಮಾಂಸ ಮತ್ತು ಸಂಸ್ಕರಿತ ಮಾಂಸಗಳಾಗಿರುವಂತಹ ಸಾಸೇಜ್, ಶೀಥಲೀಕರಿಸಿದ ಮಾಂಸಗಳು ಕ್ಯಾನ್ಸರ್ ಉಂಟು ಮಾಡುತ್ತವೆ. ಜೊತೆಗೆ ಸ್ತನ, ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ ಕಂಡುಬರುತ್ತದೆಯಂತೆ. ಅಧ್ಯಯನದಿಂದ ಕಂಡುಕೊಂಡಿರುವ ವಿಚಾರವೆಂದರೆ ಪ್ರತಿನಿತ್ಯ ಮಾಂಸ ಸೇವನೆ ಮಾಡಿದರೆ, ಅದರಿಂದ ಋತುಬಂಧಕ್ಕೆ ಮೊದಲೇ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆಯು ಶೇ.೨೨ರಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿದು ಬಂದಿದೆ.

ಮಾಂಸ, ಕೆಲವೊಂದು ಹಾಲಿನ ಉತ್ಪನ್ನಗಳು ಮತ್ತು ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಮತ್ತು ಪರಿಷ್ಕರಿಸಿದ ಕೊಬ್ಬು ಇದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆಗ ಹೃದಯಾಘಾತ, ಪಾರ್ಶ್ವ ವಾಯು, ಮಧುಮೇಹ ಮತ್ತು ಇತರ ಕೆಲವೊಂದು ಕ್ಯಾನ್ಸರ್ ಬರಬಹುದು. ಪ್ರಾಣಿಜನ್ಯ ಪ್ರೋಟೀನ್ ನ್ನು ಹೆಚ್ಚು ಸೇವನೆ ಮಾಡುವಂತಹ ಜನರಲ್ಲಿ ಶೇ.೨೨ರಷ್ಟು ಮಧುಮೇಹದ ಅಪಾಯ ಹೆಚ್ಚಾಗುವುದು. ಪರಿಷ್ಕರಿಸಿದ ಕೊಬ್ಬು ಸ್ತನ ಕ್ಯಾನ್ಸರ್, ಅಲ್ಜೈಮರ್ ಕಾಯಿಲೆ, ಬುದ್ಧಿಮಾಂದ್ಯತೆ, ನೆನಪು ಶಕ್ತಿ ಕಡಿಮೆ ಆಗುವ ಸಮಸ್ಯೆ ಆಗಬಹುದು ಎಂದು ತಿಳಿಸಿದೆ.